BIGGBOSS : ಮನೆಯೊಳಗೆ ಸೂಪರ್‌ ಸ್ಟಾರ್‌ ಎಂಟ್ರಿ……ಯಾರದು….?

ಬಿಗ್‌ಬಾಸ್‌ ಸೀಸನ್‌ 5ರಲ್ಲಿ ಒಂದಲ್ಲಾ ಒಂದು ಸರ್ಪೈಸ್‌ಗಳನ್ನು ನೀಡುತ್ತಲೇ ಬಂದಿದೆ. ಕಳೆದ ವಾರವಷ್ಟೇ ಕಿಚ್ಚ ಸುದೀಪ್‌ ಮನೆಯೊಳಗೆ ಮಾರುವೇಷದಲ್ಲಿ ಹೋಗಿ ಮನೆಯ ಸದಸ್ಯರಿಗೆ ಅಡುಗೆ ಮಾಡಿ ಬಡಿಸಿದ್ದರು.

ಇನ್ನು ಈ ವಾರ ಬಿಗ್‌ಬಾಸ್‌ ಸ್ಪರ್ಧಾಳುಗಳ ಕುಟುಂಬ ಸದಸ್ಯರು ಮನೆಯೊಳಗೆ ಆಗಮಿಸಿದ್ದು, ಜನರನ್ನು ಆಕರ್ಷಿಸಿತ್ತು. ಇದಾದ ಬಳಿಕ ಶನಿವಾರದ ಎಪಿಸೋಡ್‌ನಲ್ಲಿ ರಿಯಾಜ್‌ ಮನೆಯಿಂದ ಹೊರಬಿದ್ದರು.

ಇದೆಲ್ಲ ಮುಗಿದ ಬಳಿಕ ಇಂದಿನ ಎಪಿಸೋಡ್‌ನಲ್ಲಿ ಸೂಪರ್‌ ಸ್ಟಾರ್‌ ಒಬ್ಬರು ಮನೆಗೆ ಎಂಟ್ರಿ ನೀಡಿದ್ದಾರೆ. ಹೌದು ಕಿಚ್ಚ ಸುದೀಪ್‌ ಮತ್ತೆ ಮನೆಯೊಳಗೆ ಬಂದಿದ್ದಾರೆ. ಇಂದಿನ ಎಪಿಸೋಡ್‌ನಲ್ಲಿ ಕಿಚ್ಚ ಬಿಗ್‌ ಬಾಸ್‌ ಮನೆಯೊಳಗೆ ಎಂಟ್ರಿ ಕೊಟ್ಟು ಸ್ಪರ್ಧಿಗಳಿಗೆ ಸರ್ಪೈಸ್ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com