ಭೀಕರ ರಸ್ತೆ ಅಪಘಾತ : ಹಿರಿಯ ಪತ್ರಕರ್ತ ವೀರೇಶ ಹಿರೇಮಠ ನಿಧನ

ಬೆಳಗಾವಿ : ನಂದಗಡ ಬಳಿ ಸಂಭಲಿಸಿದ ಭೀಕರ ಅಪಘಾತದಲ್ಲಿ ಕನ್ನಡದ ಹಿರಿಯ ಪತ್ರಕರ್ತ ಡಾ. ವೀರೇಶ ಹಿರೇಮಠ ಅವರು ನಿಧನರಾಗಿದ್ದಾರೆ.
ಕುಟುಂಬಸ್ಥರೊಂದಿಗೆ ಗೋವಾ ಪ್ರವಾಸ ಮುಗಿಸಿ ಬಾಗಲಕೋಟೆಗೆ ಹಿಂತಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದ್ದು, ಕಾರಿನಲ್ಲಿದ್ದ ವೀರೇಶ್ ಮೃತಪಟ್ಟಿದ್ದಾರೆ. ಇನ್ನು ಕಾರು ಚಾಲಕ ಸುನಿಲ್‌ ಹಾಗೂ ಪತ್ನಿ ಗೌರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಧಾರವಾಡದ ಆಸ್ಪತ್ರೆಗೆ ದಾಖಲಿಸಲಾಗಿದೆ.
 ಬಾಗಲಕೋಟೆಯ ಬಿವಿವಿ ಕಾಲೇಜಿನಲ್ಲಿ ಪತ್ರಿಕೋದ್ಯಮ ಅಧ್ಯಾಪಕರಾಗಿ ವಿರೇಶ್‌ ಕಾರ್ಯ ನಿರವಹಿಸುತ್ತಿದ್ದು, ಎಂಎ, ಪಿಜಿ ಡಿಪ್ಲೋಮಾ, ಪಿಎಚ್‌ಡಿ ಪದವಿ ಪಡೆದಿದ್ದರು. ಮೃತರ ದೇಹವನ್ನು ಧಾರವಾಡದ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗಾಗಿ ರವಾನಸಲಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com