ಮಹಿಳೆಯರಿಗೆ ಚಾಕು ಹಾಕಿ ಆನಂದ ಪಡುತ್ತಿದ್ದ ಆರೋಪಿ : ಎಂಥಾ ಶಿಕ್ಷೆ ಕೊಡ್ತು ಕೋರ್ಟ್ ?
ಲಾಹೋರ್ : ಪಾಕಿಸ್ತಾನದಲ್ಲಿ ವ್ಯಕ್ತಿಯೊಬ್ಬ ಮಜಾ ಮಾಡುವ ಸಲುವಾಗಿ 17 ಮಹಿಳೆಯರ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದ ಪ್ರಕರಣ ಸಂಬಂಧ ಆತನಿಗೆ ಶಿಕ್ಷೆ ವಿಧಿಸಲಾಗಿದೆ. ದಾಳಿ ನಡೆಸಿದ್ದ ಆರೋಪಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ಅಪರಾಧಿ ಮಹಮ್ಮದ್ ಅಲಿ ಎಂಬಾತ ಪ್ರತಿನಿತ್ಯ ರಾತ್ರಿ ಕರೆಂಟ್ ತೆಗೆಯುತ್ತಿದ್ದು, ಈ ವೇಳೆ ಒಂಟಿ ಮಹಿಳೆಯರನ್ನು ಹುಡುಕಿ ಹಲ್ಲೆ ಮಾಡುತ್ತಿದ್ದ. ಅದೇ ರೀತಿ 2016ರಲ್ಲಿ ಆಸ್ಪತ್ರೆಗೆಂದು ಹೋಗುತ್ತಿದ್ದ ಮಹಿಳೆಗೆ ಈತ ಚಾಕು ಹಾಕಿದ್ದು, ಆಕೆ ಜೊತೆಗಿದ್ದ ಇನ್ನೊಬ್ಬ ಮಹಿಳೆಯನ್ನೂ ಗಾಯಗೊಳಿಸಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಈತನ ಬಗ್ಗೆ ಸತ್ಯ ಬಯಲಾಗಿತ್ತು.
ಮಹಿಳೆಯರನ್ನು ದ್ವೇಷ ಮಾಡುತ್ತಿದ್ದ ಈತ ಮಹಿಳೆಯರಿಗೆ ಚಾಕು ಇರಿದು ಆನಂದ ಪಡುತ್ತಿದ್ದ ಎಂದು ತಿಳಿದುಬಂದಿದೆ. ಪ್ರತಿದಿನ ರಾತ್ರಿ ಈತ ಕೊಲೆಗಳನ್ನು ಮಾಡುತ್ತಿದ್ದು, ಒಂದೇ ದಿನ ಮೂವರು ಮಹಿಳೆಯರ ಮೇಲೆ ದಾಳಿ ಮಾಡಿದ್ದ. ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.