ಮಹಾರಾಷ್ಟ್ರದಲ್ಲಿ ಮಗುಚಿದ ದೋಣಿ : 4 ಮಕ್ಕಳ ಸಾವು, 35 ವಿದ್ಯಾರ್ಥಿಗಳ ರಕ್ಷಣೆ

ಮುಂಬೈ : ಮಹರಾಷ್ಟ್ರದ ದಹನು ಕಡಲ ತೀರದಲ್ಲಿ 40 ವಿದ್ಯಾರ್ಥಿಗಳನ್ನ ಹೊತ್ತು ಸಾಗುತ್ತಿದ್ದ ದೋಣಿಯೊಂದು ನೀರಿನಲ್ಲಿ ಮುಳುಗಿದ್ದು, ಪರಿಣಾಮ ನಾಲ್ವರು ಮಕ್ಕಳು ಸಾವಿಗೀಡಾಗರುವ ಘಟನೆ ನಡೆದಿದೆ.
ಕೂಡಲೆ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿ 35 ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ. ಸಾವಿಗೀಡಾದವರ ಗುರುತು ಇನ್ನೂ ಪತ್ತೆಯಾಗಿಲ್ಲ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಹೆಲಿಕಾಪ್ಟರ್‌ಗಳ ಮೂಲಕ ಹುಡುಕಾಟ ನಡೆಸಲಾಗುತ್ತಿದೆ.
ರಕ್ಷಣಾ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಇತರೆ ಬೋಟ್‌ಗಳ ತೆರಳುವಿಕೆಗೆ ಅಡ್ಡಿಯಾಗಿದ್ದು, ಬೇರೆ ಮಾರ್ಗವಾಗಿ ಸಂಚರಿಸುತ್ತಿವೆ. ದೋಣಿಯ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ತುಂಬಿಸಿಕೊಂಡು ಹೋಗುತ್ತಿದ್ದ ಪರಿಣಾಮ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ದಹನುನಲ್ಲಿರುವ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಪಿಕ್‌ನಿಕ್‌ಗೆಂದು ಬೀಚ್‌ಗೆ ಬಂದಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com