ಸಚಿವ U.T ಖಾದರ್‌ ಜೊತೆ ಕಾಣಿಸಿಕೊಂಡಿದ್ದ ಇಲಿಯಾಸ್‌ನ ಬರ್ಬರ ಹತ್ಯೆ

ಮಂಗಳೂರು : ದೀಪಕ್‌ ರಾವ್‌ ಹಾಗೂ ಬಶೀರ್  ಹತ್ಯೆಯ ಬಳಿಕ ಕರಾವಳಿಯಲ್ಲಿ ಟಾರ್ಗೆಟ್‌ ಗ್ರೂಪ್‌ನ ಇಲಿಯಾಸ್‌ (31) ನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಈ ಮೂಲಕ ಶಾಂತವಾಗಿದ್ದ ಕರಾವಳಿಯಲ್ಲಿ ಮತ್ತೆ ಬೆಂಕಿ ಹೊತ್ತಿ ಉರಿಯುವ ಲಕ್ಷಣಗಳು ಗೋಚರವಾಗುತ್ತಿದೆ. ಮಂಗಳೂರಿನ ಜಪ್ಪಿನ ಮೊಗರಿನ ಕುದ್ಪಾಡಿಯಲ್ಲಿ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.

ಉಳ್ಳಾಲಯ ಟಾರ್ಗೆಟ್‌ ಗ್ರೂಪ್‌ನ ರೂವಾರಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತನಾಗಿದ್ದ ಇಲಿಯಾಸ್‌, ಮಂಗಳೂರಿನ ತನ್ನ ಮನೆಯಲ್ಲಿ ಮಲಗಿದ್ದ ವೇಳೆ ಮುಂಜಾನೆ ಇಬ್ಬರು ದುಷ್ಕರ್ಮಿಗಳು ಮನೆಗೆ ನುಗ್ಗಿ ಕೊಚ್ಚಿ ಕೊಲೆ ಮಾಡಿದ್ದಾರೆ.

ಕಳೆದ ಎರಡು ದಿನಗಳ ಹಿಂದಷ್ಟೇ ಈತ ಜೈಲಿನಿಂದ ಬಿಡುಗಡೆಯಾಗಿದ್ದ. ಆತ ಮನೆಯಲ್ಲಿ ಒಬ್ಬನೇ ಇರುವ ಮಾಹಿತಿ ಪಡೆದ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ. ಇಲ್ಯಾಸ್‌ಗೆ ಚೂರಿ ಇರಿದ ಕೂಡಲೆ ಸ್ಥಳೀಯರು ಆತನನ್ನು ಫಾದರ್‌ ಮುಲ್ಲರ್‌ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾನೆ.

ಇತ್ತೀಚೆಗಷ್ಟೇ ಆಹಾರ ಸಚಿನ ಯು.ಟಿ ಖಾದರ್‌ ಅವರ ಜೊತೆ ಇಲಿಯಾಸ್‌ ಕಾಣಿಸಿಕೊಂಡಿದ್ದ ಫೋಟೋ ಎಲ್ಲೆಡೆ ವೈರಲ್ ಆಗಿತ್ತು. ಅಲ್ಲದೆ ಈತ ಹಿಂದೆ ಉಳ್ಳಾಲದ ಕಾಂಗ್ರೆಸ್‌ನ ಉಪಾಧ್ಯಕ್ಷನಾಗಿದ್ದನು.

Leave a Reply

Your email address will not be published.