SHOCKING : ರೋಗಿಯ ಲಿವರ್‌ ಮೇಲೆ ತನ್ನ ಹೆಸರನ್ನು ಕೆತ್ತಿದ ವೈದ್ಯ….ಆಮೇಲೇನಾಯ್ತು ?

ಲಂಡನ್‌ : ವೈದ್ಯೋ ನಾರಾಯಣೋ ಹರಿಃ ಎಂಬ ಮಾತಿದೆ. ವೈದ್ಯರು ಜೀವ ಉಳಿಸುವ ದೇವರು ಎಂದೇ ನಂಬಲಾಗುತ್ತದೆ. ಆದರೆ ಲಂಡನ್‌ನಲ್ಲಿ ವೈದ್ಯನೊಬ್ಬ ಇಬ್ಬರು ರೋಗಿಗಳ ಲಿವರ್ ಮೇಲೆ ತನ್ನ ಹೆಸರನ್ನು ಕೆತ್ತಿದ್ದು. ಈ ಸಂಬಂಧ ಆತನಿಗೆ 10 ಸಾವಿರ ಪೌಂಡ್‌ಗಳ ದಂಡ ವಿಧಿಸಲಾಗಿದೆ.

ಆರೋಪಿಯ ಹೆಸರು ಸಿಮೋನ್‌ ಬಹ್ಮಲ್‌ ಎಂದು ತಿಳಿದುಬಂದಿದೆ. ಆತ ಲಿವರ್‌ ಮೇಲೆ ತನ್ನ ಹೆಸರಿನ ಮೊದಲ ಅಕ್ಷರವನ್ನು ಕೆತ್ತಿದ್ದನ್ನು ಒಪ್ಪಿಕೊಂಡಿದ್ದ. ಆದ ಕಾರಣ ಆತನಿಗೆ ಜೈಲು ಶಿಕ್ಷೆ ನೀಡದೆ ಕೇವಲ ದಂಡ ವಿಧಿಸಲಾಗಿದೆ. ಪ್ರಕರಣ ಸಂಬಂಧ ರೋಗಿಗಳ ವಿಚಾರಣೆ ನಡೆಸಿದ ನ್ಯಾಯಾಧೀಶರು, ವೈದ್ಯ, ರೋಗಿಗಳ ನಂಬಿಕೆಗೆ ದ್ರೋಹ ಮಾಡಿರುವುದಾಗಿ ಹೇಳಿದ್ದಾರೆ.

2013ರ ಫೆಬ್ರವರಿ ಹಾಗೂ ಆಗಸ್ಟ್‌ನಲ್ಲಿ 2 ಶಸ್ತ್ರ ಚಿಕಿತ್ಸೆ ನಡೆದಿದ್ದು., ಈ ವೇಳೆ ರೋಗಿಗಳ ಲಿವರ್‌ ಮೇಲೆ ಹೆಸರನ್ನು ಕೆತ್ತಿದ್ದಾನೆ. ಅದರಲ್ಲಿ ಒಬ್ಬ ರೋಗಿಯ ಲಿವರ್‌ ಫೇಲ್ಯೂರ್‌ ಆಗಿತ್ತು ಎಂದು ತಿಳಿದುಬಂದಿದೆ.

ಲಂಡನ್‌ನ ಕ್ವೀನ್ಸ್ ಎಲಿಜಬೆತ್‌ ಆಸ್ಪತ್ರೆಯಲ್ಲಿ ವೈದ್ಯನಾಗಿರುವ ಸಿಮೋನ್‌ 2014ರಲ್ಲಿ ರಾಜೀನಾಮೆ ನೀಡಿದ್ದ.

Leave a Reply

Your email address will not be published.

Social Media Auto Publish Powered By : XYZScripts.com