ಸುಪ್ರೀಂ ಜಡ್ಜ್‌ಗಳು ಮಾತನಾಡಿದಂತೆ ನೀವೂ ಮಾತನಾಡಿ : ಮಂತ್ರಿಗಳಿಗೆ ಯಶವಂತ್‌ ಸಿನ್ಹಾ ಕರೆ

ದೆಹಲಿ : ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ವಿರುದ್ದ ನಾಲ್ವರು ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿ ನಡೆಸಿದಂತೆ ದೇಶದ, ಪ್ರಜಾಪ್ರಭುತ್ವದ ಉಳಿವಿಗಾಗಿ ಮಂತ್ರಿಗಳು ಮಾತನಾಡಿ ಎಂದು ಬಿಜೆಪಿಯ ಭಿನ್ನಮತೀಯ ನಾಯಕ ಯಶವಂತ್‌ ಸಿನ್ಹಾ ಕರೆ ನೀಡಿದ್ದಾರೆ.

ದೇಶದಲ್ಲಿ 1975-77ರ ಕಾಲದ ತುರ್ತು ಪರಿಸ್ಥಿತಿಯಂತಹ ವಾತಾವರಣ ಕಾಣುತ್ತಿದೆ. ಸಂಸತ್‌ ಕಲಾಪದ ಅವಧಿಯೂ ಕಡಿಮೆಯಾಗುತ್ತಿದೆ. ಸುಪ್ರೀಂಕೋರ್ಟ್‌ ಸರಿಯಾಗಿ  ಕಾರ್ಯನಿರ್ವಹಿಸುತ್ತಿಲ್ಲ ಎಂದಾದರೆ ಇದು ದೇಶಕ್ಕೇ ಅಪಾಯ ಎಂದಿದ್ದಾರೆ.

ಸುಪ್ರೀಂಕೋರ್ಟ್‌ನ ಜಡ್ಜ್‌ಗಳೇ ನ್ಯಾಯಾಂಗ ವ್ಯವಸ್ಥೆ ಸರಿಯಿಲ್ಲ ಎಂದು ಮಾತನಾಡುತ್ತಾರೆ ಎಂದಾದರೆ ನಾವು ಅದನ್ನು ಗಂಭೀರವಾಗಿ ಪರಿಗಣಿಸಬೇಕು. ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಪ್ರಜೆಗಳೇ ಪ್ರಭುಗಳು. ಪ್ರತಿಯೊಬ್ಬ ಪ್ರಜೆಗೂ ಮಾತನಾಡುವ ಹಕ್ಕಿದೆ. ಎಲ್ಲರೂ ಮಾತನಾಡುವಂತಾಗಬೇಕು. ಎಲ್ಲರೂ ಮಾತನಾಡಿ. ಸುಪ್ರೀಂಕೋರ್ಟ್‌ ಜಡ್ಜ್‌ರಂತೆ ಮೋದಿ ಮೊದಲಿಗರು ಅಷ್ಟೇ ಎಂದಿದ್ದಾರೆ.

 

Leave a Reply

Your email address will not be published.