ದ.ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ರಹಾನೆ ಕೈ ಬಿಟ್ಟಿದ್ದಕ್ಕೆ ಕೊಹ್ಲಿ ಹೇಳಿದ್ದೇನು…?

ದೆಹಲಿ : ದಕ್ಷಿಣ ಆಫ್ರಿಕಾ ವಿರುದ್ದದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌  ಅಜಿಂಕ್ಯಾ ರಹಾನೆ ಅವರನ್ನು ಕಡೆಗಣಿಸಿರುವ ವಿಚಾರ ಎಲ್ಲೆಡೆ ಚರ್ಚೆಗೆ ಕಾರಣವಾಗಿತ್ತು. ರಹಾನೆ ಬದಲಿಗೆ ರೋಹಿತ್‌ ಶರ್ಮಾ ಅವರನ್ನು ಆಯ್ಕೆ ಮಾಡಲಾಗಿದ್ದು, ಎರಡೂ ಇನ್ನಿಂಗ್ಸ್‌ನಲ್ಲಿ ರೋಹಿತ್‌ ನೀರಸ ಪ್ರದರ್ಶನ ನೀಡಿದ್ದರು.

ಈಗ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಪಂದ್ಯದಲ್ಲೂ ರಹಾನೆಗೆ ವಿಶ್ರಾಂತಿ ನೀಡಲಾಗಿದೆ. ಈ ವಿಚಾರ ಸಂಬಂಧ ಟೀ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಪ್ರತಿಕ್ರಿಯಿಸಿದ್ದು, ರಹಾನೆಯವರನ್ನು ಬೇಡವೆಂದಿದ್ದ ಜನರೇ ಅವರು ಬೇಕು ಎನ್ನುತ್ತಿರುವುದು ತಮಾಷೆ ಎನಿಸುತ್ತಿದೆ ಎಂದಿದ್ದಾರೆ.

ಮೊದಲ ಟೆಸ್ಟ್‌ ಆರಂಭಕ್ಕೂ ಮುನ್ನ ರಹಾನ ತಂಡದಲ್ಲಿಲ್ಲದ್ದರ ಬಗ್ಗೆ ಯಾಲೂ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಆಕಸ್ಮಿಕವಾಗಿ ಎಲ್ಲ ಬದಲಾಗಿದೆ ಎಂದಿದ್ದಾರೆ. ಅಲ್ಲದೆ ನಮ್ಮ ಪಾಲಿಗೆ ತಂಡದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ. ಹೊರಗಿನ ಹೇಳಿಕೆಗಳಿಗೆ ಆಸ್ಪದವಿಲ್ಲ. ರಹಾನೆ ಎಂದಿಗೂ ಗುಣಮಟ್ಟದ ಆಟಗಾರನೇ ಎಂದಿದ್ದಾರೆ.

ಭಾರತ-ದಕ್ಷಿಣ ಆಫ್ರಿಕಾ ಪಂದ್ಯದಲ್ಲಿ ಮೊದಲ ಟೆಸ್ಟ್‌ನಲ್ಲಿ ಭಾರತ 72ರನ್‌ಗಳ ಸೋಲನುಭವಿಸಿತ್ತು. ಈ ಹಿನ್ನೆಲೆಯಲ್ಲಿ ರಹಾನೆ ಬಗ್ಗೆ ಚರ್ಚೆ ಪ್ರಾರಂಭವಾಗಿತ್ತು.

 

 

Leave a Reply

Your email address will not be published.

Social Media Auto Publish Powered By : XYZScripts.com