Cricket : ಸೆಂಚುರಿಯನ್ ಅಂಗಳದಲ್ಲಿ 2ನೇ ಟೆಸ್ಟ್ : ತಿರುಗೇಟು ನೀಡುವುದೇ ಭಾರತ..?

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಸೆಂಚುರಿಯನ್ ನಲ್ಲಿ ಶನಿವಾರ ಎರಡನೇ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ. ಮೊದಲ ಪಂದ್ಯದಲ್ಲಿ 72 ರನ್ ಸೋಲನುಭವಿಸಿದ ಭಾರತ ಸರಣಿಯಲ್ಲಿ 1-0 ಹಿನ್ನಡೆಯಲ್ಲಿದೆ.

ಸೆಂಚುರಿಯನ್ ಅಂಗಳದಲ್ಲಿ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಆಫ್ರಿಕಾ ತಂಡಕ್ಕೆ ತಿರುಗೇಟು ನೀಡುವ ತವಕದಲ್ಲಿದೆ. ಶುಕ್ರವಾರ ಸುದ್ದಿಗೋಷ್ಟಿ ನಡೆಸಿರುವ ನಾಯಕ ವಿರಾಟ್ ಕೊಹ್ಲಿ, ತಂಡದ ಪ್ಲೇಯಿಂಗ್ ಇಲೆವನ್ ನಲ್ಲಿ ಬದಲಾವಣೆ ಮಾಡುವ ಸಾಧ್ಯತೆಯ ಸುಳಿವನ್ನು ನೀಡಿದ್ದಾರೆ.

ರೋಹಿತ್ ಶರ್ಮಾ ಬದಲಿಗೆ ಅಜಿಂಕ್ಯ ರಹಾನೆ ಅವರನ್ನು ಕಣಕ್ಕಿಳಿಸಲಿದೆಯೇ ಎಂಬುದು ಕುತೂಹಲ ಮೂಡಿಸಿದೆ. ಶಿಖರ್ ಧವನ್ ಸ್ಥಾನದಲ್ಲಿ, ಆರಂಭಿಕ ಆಟಗಾರನಾಗಿ ಕೆ ಎಲ್ ರಾಹುಲ್ ಅವರಿಗೆ ಅವಕಾಶ ದೊರೆಯುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ‘ ನಮಗೆ ತಂಡದ ಸಮತೋಲನ ಮುಖ್ಯ, ತಂಡದ ಅಗತ್ಯಕ್ಕೆ ತಕ್ಕಂತೆ ಬದಲಾವಣೆ ಮಾಡಲಾಗುವುದು ‘ ಎಂದು ಕೊಹ್ಲಿ ಹೇಳಿದ್ದಾರೆ.

ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಬದಲಿಗೆ ಪಾರ್ಥಿವ್ ಪಟೇಲ್ ಅವರಿಗೆ ಅವಕಾಶ ದೊರೆಯಬಹದು. ಸ್ವಿಂಗ್ ಗೆ ಹೆಚ್ಚು ನೆರವು ನೀಡದ ಸೆಂಚುರಿಯನ್ ನಲ್ಲಿ ಭುವನೇಶ್ವರ್ ಕುಮಾರ್ ಅವರ ಜಾಗಕ್ಕೆ ಇಶಾಂತ್ ಶರ್ಮಾರನ್ನು ಆಡಿಸುವ ಬಗ್ಗೆಯೂ ಆಲೋಚನೆ ನಡೆದಿದೆ.

Leave a Reply

Your email address will not be published.

Social Media Auto Publish Powered By : XYZScripts.com