Cricket – 2nd Test : ಆತಿಥೇಯರಿಗೆ ಮರ್‌ಕ್ರಮ್ , ಆಮ್ಲ ಆಸರೆ : ಮಿಂಚಿದ ಅಶ್ವಿನ್

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಸೆಂಚುರಿಯನ್ ನಲ್ಲಿ ಶನಿವಾರ ಎರಡನೇ ಟೆಸ್ಟ್ ಆರಂಭಗೊಂಡಿದೆ. ಭಾರತ ತಂಡದಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿದ್ದು, ಶಿಖರ್ ಧವನ್ ಸ್ಥಾನಕ್ಕೆ ಕೆ ಎಲ್ ರಾಹುಲ್, ವೃದ್ಧಿಮಾನ್ ಸಹಾ ಜಾಗದಲ್ಲಿ ಪಾರ್ಥಿವ್ ಪಟೇಲ್, ಭುವನೇಶ್ವರ್ ಕುಮಾರ್ ಬದಲಿಗೆ ಇಶಾಂತ್ ಶರ್ಮಾ ಅವರನ್ನು ಕಣಕ್ಕಿಳಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ತನ್ನ ಪ್ರಥಮ ಇನ್ನಿಂಗ್ಸ್ ನಲ್ಲಿ ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 269 ರನ್ ಗಳಿಸಿದೆ. ದ.ಆಫ್ರಿಕಾ ಪರವಾಗಿ ಏಡನ್ ಮರ್ಕ್ರಮ್ 94, ಹಾಶಿಮ್ ಆಮ್ಲ 82 ರನ್ ಗಳಿಸಿದರು.

ಭಾರತದ ಪರವಾಗಿ  ಆರ್ ಅಶ್ವಿನ್ 3 ಹಾಗೂ ಇಶಾಂತ್ ಶರ್ಮಾ 1 ವಿಕೆಟ್ ಪಡೆದರು. ದಿನದಾಟದ ಅಂತ್ಯಕ್ಕೆ ನಾಯಕ ಫಾಫ್ ಡು ಪ್ಲೆಸಿಸ್ (24) ಹಾಗೂ ಕೇಶವ್ ಮಹಾರಾಜ್ (10) ಅಜೇಯರಾಗುಳಿದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com