ಟ್ರ್ಯಾಕ್ಟರ್‌ -ಕ್ರೂಸರ್‌ ಡಿಕ್ಕಿ : ಪಂದ್ಯ ಮುಗಿಸಿ ಮನೆಗೆ ತೆರಳುತ್ತಿದ್ದ 6 ಮಂದಿ ಕುಸ್ತಿಪಟುಗಳ ಸಾವು

ಚಿಕ್ಕೋಡಿ : ಟ್ರ್ಯಾಕ್ಟರ್‌ ಮತ್ತು ಕ್ರೂಜರ್‌ ಡಿಕ್ಕಿಯಾದ ಪರಿಣಾಮ ಆರು ಮಂದಿ ಕುಸ್ತಿಪಟುಗಳು ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಮಹಾರಾಷ್ಟ್ರದ  ಸಾಂಗ್ಲಿ ಜಿಲ್ಲೆಯ ಕಡೆಗಾಂವ್‌ ಬಳಿ ನಡೆದಿದೆ.

ಮೃತ ಕುಸ್ತಿಪಟುಗಳನ್ನು ಆಕಾಶ್‌ ದೇಸಾಯಿ, ವಿಜಯ್ ಪಾಟೀಲ್‌, ಸೌರಭ್ ಮಾನೆ, ಶುಭಂ ಘಾರ್ಗೆ, ಅವಿನಾಶ ಗಾಯಕ್ವಾಡ್‌ ಮತ್ತು ರಂಜಿತ್‌ ಧನವಾಡೆ ಎಂದು ಗುರುತಿಸಲಾಗಿದೆ. ಇನ್ನು ಅಪಘಾತದಲ್ಲಿ ಆರು ಮಂದಿ ಕುಸ್ತಿಪಟುಗಳಿಗೆ ಗಂಭೀರವಾಗಿ ಗಾಯಗಳಾಗಿರುವುದಾಗಿ ತಿಳಿದುಬಂದಿದೆ. ಗಾಯಾಳುಗಳನ್ನು ಸಮೀಪದ ಮೀರಜ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕ್ರೂಜರ್‌ನಲ್ಲಿ ಒಟ್ಟು 14 ಮಂದಿ ಕುಸ್ತಿ ಪಟುಗಳಿದ್ದರು. ಇವರೆಲ್ಲ ಶುಕ್ರವಾರ ಮದ್ಯರಾತ್ರಿ ಸತಾರಾದಿಂದ ಕುಸ್ತಿ ಪಂದ್ಯ ಮುಗಿದ ಬಳಿಕ ತಮ್ಮ ಸ್ವಗ್ರಾಮಗಳಿಗೆ ತೆರಳುತ್ತಿದ್ದರು. ಈ ವೇಳೆ ಟ್ರ್ಯಾಕ್ಟರ್‌ ವಿರುದ್ದ ಮಾರ್ಗದಲ್ಲಿ ಸತಾರಾ ಕಡೆಗೆ ಹೋಗುತ್ತಿತ್ತು. ಈ ವೇಳೆ ಅಪಘಾತ ಸಂಭವಿಸಿದೆ.ಡಿಕ್ಕಿ ಹೊಡೆದ ರಭಸಕ್ಕೆ ಆರು ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಘಟನೆ ಸಂಬಂಧ ಕಡೆಗಾಂವ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com