ಪತ್ನಿ ಮೇಲೆ ಪೌರುಷ ತೋರಿದ ಪತಿ, ಬಳಿಕ ಹೆದರಿ ಮಾಡಿದ್ದೇನು……?

ಬೆಂಗಳೂರು : ಗಂಡ ಹೆಂಡತಿ ಎಂದ ಮೇಲೆ ಚಿಕ್ಕ ಪುಟ್ಟ ಜಗಳ ಬರುವುದು ಸಾಮಾನ್ಯ. ಆದರೆ ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ಪತ್ನಿಯ ಶೀಲ ಶಂಕಿಸಿ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪತಿ ಬಳಿಕ ಹೆದರಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಹೆನ್ರೀ ಫರ್ನಾಂಡಿಸ್‌ (35) ಎಂದು ಗುರುತಿಸಲಾಗಿದೆ. ಪತ್ನಿ ಚಿತ್ರಾ ಪ್ರಾಣಾಪಾಯದಿಂದ ಪಾರಾಗಿದ್ದು, ಕೆ.ಆರ್‌ ಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಹೆನ್ರೀ ಆಟೋ ಚಾಲಕನಾಗಿದ್ದು, ಕಳೆದ ತಿಂಗಳಿನಿಂದ ಪತಿ -ಪತ್ನಿಯರ ಮಧ್ಯೆ ಜಗಳ ನಡೆಯುತ್ತಿತತು. ಶುಕ್ರವಾರ ಬೆಳಗ್ಗೆ ಕೆ.ಆರ್‌ ಪುರದ ದೇವಸಂದ್ರದಲ್ಲಿರುವ ಚಿತ್ರಾರ ಪೋಷಕರ ಮನೆಯಿಂದ ಚಿತ್ರಾ ಹಾಗೂ ಮಕ್ಕಳನ್ನು ರಾಮಮೂರ್ತಿನಗರದ ಸೇಂಟ್‌ ಆನ್ಸ್‌ಶಾಲೆ ಕರೆದುಕೊಂಡು ಬಂದು ಮಕ್ಕಳನ್ನು ಶಾಲೆಗೆ ಬಿಟ್ಟಿದ್ದಾರೆ.

ಇದೇ ವೇಳೆ ಇಬ್ಬರ ಮಧ್ಯೆ ಮತ್ತೆ ಜಗಳವಾಗಿದೆ. ಆಗ ಪತಿ ಚಿತ್ರಾಳ ತಲೆ ಹಾಗೂ ಬಲಗೈಗೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಚಿತ್ರಾ ಮನೆಯಲ್ಲೇ ಕುಸಿದು ಬಿದ್ದಿದ್ದಾರೆ. ಪತ್ನಿ ಸಾವನ್ನಪ್ಪಿದ್ದಾಳೆಂದು ತಿಳಿದ ಹೆನ್ರಿ ಭಯದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಕೆ.ಆರ್‌ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com