ಸೋರಿಕೆಯಾಯ್ತು ಚುನಾವಣಾ ಪೂರ್ವ ಸಮೀಕ್ಷೆ : ಗೆಲ್ಲೋ ಸಾಧ್ಯತೆ ಬಗ್ಗೆ ಸತ್ಯ ಬಹಿರಂಗ

ಬೆಂಗಳೂರು : ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಚುನಾವಣಾ ಪೂರ್ವ ಸಮೀಕ್ಷೆ ನಡೆಸತೊಡಗಿವೆ. ಅಂತೆಯೇ ಕಾಂಗ್ರೆಸ್‌ ಪಕ್ಷ  ಸಿಎಚ್‌ಎಸ್‌ ಎಂಬ ಖಾಸಗಿ ಸಂಸ್ಥೆಗೆ ಚುನಾವಣಾ ಪೂರ್ವ ಸಮೀಕ್ಷೆ ನಡೆಸಲು ತಿಳಿಸಿದ್ದು, ಈ ಸಂಸ್ಥೆ ನಡೆಸಿದ ಸಮೀಕ್ಷೆ ಸೋರಿಕೆಯಾಗಿದೆ.

ಈ ಸಮೀಕ್ಷೆ ಕೈ ಸೇರಿದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ ಹೈಕಮಾಂಡ್‌ ಜೊತೆ ಚರ್ಚಿಸಲು ದೆಹಲಿಗೆ ದೌಡಾಯಿಸಿದ್ದಾರೆ.

ಸಿಎಚ್‌ಎಸ್‌ ಸಂಸ್ಥೆಯ ಪ್ರಕಾರ ಚುನಾವಣಾ ಪೂರ್ವ ಸಮೀಕ್ಷೆ ಹೇಳುವುದೇನು ?

ಸಿಎಚ್‌ಎಸ್‌ ಸಂಸ್ಥೆ ಕರ್ನಾಟಕದಾದ್ಯಂತ ಡಿಸೆಂಬರ್‌ 2ರಿಂದ 19ರವರೆಗೆ ಸಮೀಕ್ಷೆ ನಡೆಸಿದ್ದು, 4, 48,000ಮತದಾರರನ್ನು ಸಂದರ್ಶನ ಮಾಡಿರುವುದಾಗಿ ತಿಳಿದುಬಂದಿದೆ.

ಈ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್‌ಗೆ 36.4 % ಮತದಾರರು ಶಹಬ್ಬಾಶ್‌ ಗಿರಿ ನೀಡಿದ್ದರೆ, 33.2 % ಮಂದಿ ಬಿಜೆಪಿ ಪರ ಇದ್ದಾರೆ. ಇನ್ನು ಜೆಡಿಎಸ್‌ ಪರವಾಗಿರುವ ಶೇಕಡಾವಾರು ಜನರ ಸಂಖ್ಯೆ ಶೇ.24.9ರಷ್ಟಿದೆ. ರಾಜ್ಯದಲ್ಲಿ ಸ್ವತಂತ್ರ್ಯ ಅಭ್ಯರ್ಥಿಗಳ ಪರ ಶೇ.5.5ರಷ್ಟು ಜನರಿದ್ದಾರೆ ಎಂದು ತಿಳಿದುಬಂದಿದೆ.

ನಿರೀಕ್ಷೆಯಂತೆ ಅಹಿಂದ ಮತದಾರರು ಕಾಂಗ್ರೆಸ್‌ ಪರವಿದ್ದು, ರಾಜ್ಯದಲ್ಲಿ ನಡೆಯುತ್ತಿರುವ ಕೋಮುಗಲಭೆಯಿಂದಾಗಿ ಒಂದಷ್ಟು ಮತಗಳು ಬಿಜೆಪಿ ಪಾಲಾಗಿವೆ. ರಾಜ್ಯದ ಶೇ. 62ರಷ್ಟು ಮಂದಿ ಮುಸ್ಲೀಮರು ಸಿದ್ದರಾಮಯ್ಯ ಸರ್ಕಾರದ ಪರವಾಗಿದ್ದರೆ, ಹೈದರಾಬಾದ್‌ ಕರ್ನಾಟಕ ಭಾಗದ ಮುಸ್ಲೀಮರು ಜೆಡಿಎಸ್‌ ಪರ ವಾಲಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.

ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ 77 ರಿಂದ 81 ಸ್ಥಾನ ಗಳಿಸುವ ಸಾಧ್ಯತೆ ಇದೆ. ಇನ್ನು ಬಿಜೆಪಿ 73 ರಿಂದ 76 ಸ್ಥಾನ ಗಳಿಸಲಿದೆ. ಜೆಡಿಎಸ್‌ಗೆ 64 ರಿಂದ 66 ಸ್ಥಾನ ಲಭಿಸಲಿದ್ದು, 4 ರಿಂದ 5 ಸ್ಥಾನ ಇತರೆ ಅಭ್ಯರ್ಥಿಗಳಿಗೆ ಸಿಗಲಿದೆ ಎಂದು ಸಂಸ್ಥೆ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.

One thought on “ಸೋರಿಕೆಯಾಯ್ತು ಚುನಾವಣಾ ಪೂರ್ವ ಸಮೀಕ್ಷೆ : ಗೆಲ್ಲೋ ಸಾಧ್ಯತೆ ಬಗ್ಗೆ ಸತ್ಯ ಬಹಿರಂಗ

  • January 14, 2018 at 7:43 AM
    Permalink

    how many serve’s done which is the true and which is falls?

    Reply

Leave a Reply

Your email address will not be published.

Social Media Auto Publish Powered By : XYZScripts.com