ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ : ಇಲ್ಲಿದೆ ಸಂಪೂರ್ಣ Details

ಬೆಂಗಳೂರು : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಈ ಬಾರಿಯ ಉತ್ತಮ ಪತ್ರಕರ್ತರನ್ನು ಆಯ್ಕೆ ಮಾಡಿದೆ. ಕಳೆದ ಎಂಟು ದಶಕಗಳಿಂದ ಪ್ರತೀ ವರ್ಷವೂ ವೃತ್ತಿ ನಿರತ ಪತ್ರಕರ್ತರ ಪ್ರತಿಭೆ, ಶ್ರಮ ಹಾಗೂ ಬದ್ದತೆಯನ್ನು ಗುರುತಿಸಿ ಉತ್ತೇಜಿಸುವ ಕೆಲಸ ಮಾಡುತ್ತಿದ್ದು, ಕೆಳಕಂಡ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿದ್ದಾರೆ.  ಸಂಘದ 33ನೇ  ರಾಜ್ಯ  ಸಮ್ಮೇಳನ ಜ.20 ಮತ್ತು 21 ರಂದು ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ನಡೆಯಲಿದ್ದು,  ಈ ಸಂದರ್ಭದಲ್ಲಿ ಪ್ರಶಸ್ತಿಗಳನ್ನು  ನೀಡಿ ಗೌರವಿಸಲಾಗುವುದು ಎಂದು ಸಂಘದ ಅಧ್ಯಕ್ಷ ಎನ್.ರಾಜು ತಿಳಿಸಿದ್ದಾರೆ.

2017-18 ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಪಡಿಸುತ್ತಿದ್ದು, ಈ ಕೆಳಕಂಡ  ಕ್ರೀಯಾಶೀಲ. ಸಾಧಕ ಮತ್ತು ಪ್ರತಿಭಾನ್ವಿತರು ಈ ಕೆಳಕಂಡ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

೧.ಶ್ರೀ ಡಿ.ವಿ ಗುಂಡಪ್ಪ ಪ್ರಶಸ್ತಿ:         ಶ್ರೀ ಮಹಾದೇವಪ್ರಕಾಶ್ ಸಂಪಾದಕರು  ಈ ಭಾನುವಾರ ಪತ್ರಿಕೆ
೨. ಶ್ರೀ ಗರುಡನ ಗಿರಿ ನಾಗರಾಜ್ ಪ್ರಶಸ್ತಿ:     ಶ್ರೀ ಗುಡಿಹಳ್ಳಿ ನಾಗರಾಜ್, ಹಿರಿಯ ಪತ್ರಕರ್ತರು
೩. ಶ್ರೀ ಎಸ್.ವಿ ಜಯಶೀಲರಾವ್ ಪ್ರಶಸ್ತಿ:   ಶ್ರೀ ವೀರಭದ್ರಪ್ಪಗೌಡ ಪತ್ರಕರ್ತರು ಬಳ್ಳಾರಿ
೪.ಶ್ರೀ ಡಾ. ಎಂ.ಎಂ ಕಲ್ಬುರ್ಗಿ ಪ್ರಶಸ್ತಿ   :   ಶ್ರೀ ಡಾ. ಸರೂಜ್ ಕಾಟ್ಕರ್  ಹಿರಿಯ ಪತ್ರಕರ್ತರು ಬೆಳಗಾವಿ
೫. ಶ್ರೀ ಪಾಟೀಲ್ ಪುಟ್ಟಪ್ಪ(ಪಾಪು) ಪ್ರಶಸ್ತಿ:  ಶ್ರೀ ಬಸವರಾಜಸ್ವಾಮಿ ಸಂಪಾದಕರು ಸುದ್ದಿಮೂಲ  ರಾಯಚೂರು
೬. ಶ್ರೀ ಎಂ. ನಾಗೇಂದ್ರರಾವ್ ಪ್ರಶಸ್ತಿ:       ಶ್ರೀ ದೇಶಾದ್ರಿ ಶಿವಮೊಗ್ಗ. ಕನ್ನಡ ಪ್ರಭ  ಬೆಂಗಳೂರು
೭. ಶ್ರೀ ಹೆಚ್.ಎಸ್ ರಂಗಸ್ವಾಮಿ ಪ್ರಶಸ್ತಿ:      ಶ್ರೀ ಆರ್.ಟಿ ವಿಠಲಮೂರ್ತಿ, ಪತ್ರಕರ್ತರು ಬೆಂಗಳೂರು
೮.ಶ್ರೀ ಮಿಂಚುಶ್ರೀನಿವಾಸ್ ಪ್ರಶಸ್ತಿ:          ಶ್ರೀ ವೈ.ಗ ಜಗದೀಶ್  ಹಿರಿಯ ಪತ್ರಕರ್ತರು ಪ್ರಜಾವಾಣಿ
-_————-೦———

ಲೇಖನ ,ವರದಿ ಬರಹಗಳ ಆಧರಿಸಿ ಕೊಡ ಮಾಡುವ ಪ್ರಶಸ್ತಿಗಳು, ವಿಶೇಷ ಪ್ರಶಸ್ತಿಗಳು.

ಶ್ರೀಮತಿ ಯಶೋದಮ್ಮ ಜಿ. ನಾರಾಯಣ  ಪ್ರಶಸ್ತಿ( ಗ್ರಾಮಾಂತರ ಭಾಗದಲ್ಲಿ ೨೦ ವರ್ಷ ಸೇವೆ ಸಲ್ಲಿಸಿರುವ ಹಿರಿಯ ಮಹಿಳಾ ಪತ್ರಕರ್ತರಿಗೆ ):   ಶ್ರೀಮತಿ ಎಂ,ಎಚ್ ನೀಳಾ

ಬದರಿನಾಥ ಹೊಂಬಾಳೆ ಪ್ರಶಸ್ತಿ (ರಾಜ್ಯ ಸಮ್ಮೇಳನ ನಡೆಯುವ ಜಿಲ್ಲೆಯಲ್ಲಿನ ಪತ್ರಕರ್ತರೊಬ್ಬರಿಗೆ ): ಜಿ..ಆರ್ ಉದಯಕುಮಾರ್ ಇಂಡಿಯನ್ ಎಕ್ಸ್ ಪ್ರೆಸ್ . ಹಾಸನ

ಪಿ.ಆರ್ ರಾಮಯ್ಯ ಸ್ಮಾರಕ ಪ್ರಶಸ್ತಿ (ಪತ್ರಿಕೋದ್ಯಮದಲ್ಲಿ ಮತ್ತು ಪತ್ರಿಕಾ ಸಂಘಟನೆಗಳಲ್ಲಿ ದೀರ್ಘ ಸೇವೆಸಲ್ಲಿಸಿದವರಿಗೆ ) : ಡಾ. ಕೆ ಉಮೇಶ್ವರ್ ಹಿರಿಯ ಪತ್ರಕರ್ತರು  ಬೆಂಗಳೂರು

ಡಿವಿಜಿ ಪ್ರಶಸ್ತಿ ( ಪತ್ರಕರ್ತರ ರಾಜ್ಯ ಸಮ್ಮೇಳನ ನಡೆಯುವ ಜಿಲ್ಲೆಯಲ್ಲಿ ಗಣನೀಯ ಸೇವೆ ಸಲ್ಲಿಸಿದರವರಿಗೆ): ಜೆ.ಆರ್ ಕೆಂಚೇಗೌಡ,ಸಂಪಾದಕರು ಪ್ರಜೋದಯ ಹಾಸನ

ಕಿಡಿಶೇಷಪ್ಪ ಪ್ರಶಸ್ತಿ( ಸಣ್ಣಮತ್ತು ಮಧ್ಯಮ ಪತ್ರಿಕೆಯ ಸಂಪಾದಕರೊಬ್ಬರಿಗೆ):ಶ್ರೀ ಬಸವೇಗೌಡ ಸಂಪಾದಕರು,ನುಡಿ ಭಾರತಿ ಮಂಡ್ಯ

ಆರ್.ಶಾಮಣ್ಣ ಪ್ರಶಸ್ತಿ(ಅತ್ಯುತ್ತಮ ಮುಖಪುಟ ವಿನ್ಯಾಸಕ್ಕೆ ನೀಡುವ ಪ್ರಶಸ್ತಿ): ಸುವರ್ಣಟೈಮ್ಸ್ ಆಫ್ ಕರ್ನಾಟಕ ,ಬೆಂಗಳೂರು

ಜಿ,ನಾರಾಯಸ್ವಾಮಿ ಪ್ರಶಸ್ತಿ(ಅತ್ಯುತ್ತಮ ಗ್ರಾಮಾಂತರ ವರದಿಗೆ): ಶ್ರೀಕಾಯಪಂಡ ಶಶಿಸೋಮಯ್ಯ, ವರದಿಗಾರರು ಶಕ್ತಿ ದಿನಪತ್ರಿಕೆ  ಕೊಡಗು

ಪಟೇಲ್ ಭೈರಹನುಮಯ್ಯ ಪ್ರಶಸ್ತಿ( ಅತ್ಯುತ್ತಮ ಮಾನವೀಯ ವರದಿಗೆ): ಮಯಾಶರ್ಮ,ವರದಿಗಾರರು ಎನ್.ಡಿ ಟಿವಿ ಬೆಂಗಳೂರು

ಗಿರಿಧರ್ ಪ್ರಶಸ್ತಿ(ಅತ್ಯುತ್ತಮ ಅಪರಾಧ ವರದಿಗೆ): ಶ್ರೀ ಕೆ.ಗಿರೀಶ್, ವಿಜಯಕರ್ನಾಟಕ ಬೆಂಗಳೂರು

ಬಿ.ಎಸ್ ವೆಂಕಟರಾಂ ಪ್ರಶಸ್ತಿ(ಅತ್ಯುತ್ತಮ ಸ್ಕೂಪ್ ವರದಿ):ಧ್ಯಾನ್ ಪೊಣಚ್ಚ,ವರದಿಗಾರರು ಹೊಸದಿಗಂತ ಬೆಂಗಳೂರು

ಎ.ಎಲ್ ನಾಗೇಶ್ ವಿಜಯಕರ್ನಾಟಕ ಚನ್ನರಾಯಪಟ್ಟಣ

ಖಾದ್ರಿಶಾಮಣ್ಣ ಪ್ರಶಸ್ತಿ( ಅತ್ಯುತ್ತಮ ವಿಮರ್ಶಾತ್ಮಕ ಲೇಖನಕ್ಕೆ): ಕೆಂಚೇಗೌಡ ವಿಜಯ ಕರ್ನಾಟಕ, ರವಿಪ್ರಕಾಶ್ ಪ್ರಜಾವಾಣಿ.

ಕೆ.ಎ ನೆಟ್ಟಕಲ್ಲಪ್ಪ ಪ್ರಶಸ್ತಿ (ಅತ್ಯುತ್ತಮ ಕ್ರೀಡಾವರದಿಗೆ): ಡಿ.ಪಿ ರಘುನಾಥ್ ವರದಿಗಾರರು ವಿಜಯವಾಣಿ. ಬಿ.ಆರ್ .ವಿಶ್ವನಾಥ್ ಸಂಜೆವಾಣಿ ಬೆಂಗಳೂರು

ಮಂಗಳ ಎಂ.ಸಿ ವರ್ಗಿಸ್ ಪ್ರಶಸ್ತಿ(ವಾರಪತ್ರಿಕೆಯಲ್ಲಿ ಪ್ರಕಟವಾದ ಅತ್ಯುತ್ತಮ ಚಿತ್ರ ಲೇಖನಕ್ಕೆ ): ಶ್ರೀಮತಿ ಶಾಂತಲಾ ಧರ್ಮರಾಜ್ ಸಂಪಾದಕರು ಕಸ್ತೂರಿ, ಬೆನಕನಹಳ್ಳಿ ಶೇಖರಗೌಡ, ಹಿರಿಯ ಪತ್ರಕರ್ತರು,

ಆರ್.ಎಲ್ ವಾಸುದೇವರಾವ್ ಪ್ರಶಸ್ತಿ ( ವನ್ಯಜೀವಿಗಳ ಕುರಿತ ಅತ್ಯುತ್ತಮವರದಿಗೆ):ರಶ್ಮಿಭಟ್ ವರದಿಗಾರರು  ದಿ ಹಿಂದೂ ಪತ್ರಿಕೆ

ಮಂಡಿಬೆಲೆ ರಾಜಣ್ಣ ಪ್ರಶಸ್ತಿ (ಅತ್ಯುತ್ತಮ ಸುದ್ದಿ ಛಾಯಾಚಿತ್ರಕ್ಕೆ ) : ಎಂ.ಎಸ್ ಬಸವಣ್ಣ ಮೈಸೂರು , ಚಂದ್ರಮೋಹನ್ ಕುಶಾಲನಗರ

ಆರ್. ಎಲ್ ವಾಸುದೇವರಾವ್ ಪ್ರಶಸ್ತಿ ( ಅರಣ್ಯ ಕುರಿತ ಅತ್ಯುತ್ತಮ ಲೇಖನಕ್ಕೆ ):ಶಿವಮೂರ್ತಿ ಜಪ್ತಿಮಠ, ವರದಿಗಾರರು ವಿಜಯಕರ್ನಾಟಕ ಮೈಸೂರು

ಬಿ.ಜಿ ತಿಮ್ಮಪ್ಪಯ್ಯ ಪ್ರಶಸ್ತಿ( ಆರ್ಥಿಕ ದುರ್ಬಲ ವರ್ಗದವರ ಸ್ಥಿತಿ-ಗತಿ ಕುರಿತ ವರದಿ):ಹೇಮಾವೆಂಕಟ್ ಪ್ರಜಾವಾಣಿ

ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ( ಗ್ರಾಮೀಣ ಜನಜೀವನ ಕುರಿತ ಅತ್ಯುತ್ತಮ ವರದಿ): ಬಸವರಾಜ್ ಹವಲ್ದಾರ್ , ಪ್ರಜಾವಾಣಿ

ಬೆಂಗಳೂರು ನಿರ್ಮಾತೃ ಕೆಂಪೇಗೌಡ ಸ್ಮಾರಕ ಪ್ರಶಸ್ತಿ (ಬೆಂಗಳೂರು ಜಿಲ್ಲೆ ಅಭಿವೃದ್ದಿ ಕುರಿತು): ಗಿರೀಶ್ ಗರಗ ವಿಜಯವಾಣಿ ,
ನಾಗರತ್ನ , ವಿಶ್ವವಾಣಿ

ಯಜಮಾನ್ ಟಿ ನಾರಾಯಣಪ್ಪ ಸ್ಮಾರಕ ಪ್ರಶಸ್ತಿ (ಅತ್ಯುತ್ತಮ ಕೃಷಿ ವರದಿ): ಶ್ರೀಮತಿ ಕೀರ್ತನ ಸಂಯುಕ್ ತಕರ್ನಾಟಕ ಬೆಳಗಾವಿ. ಕೀರ್ತಿ ಪ್ರಸಾದ್ ಉದಯವಾಣಿ

ಹಾಸ್ಯ ಚಕ್ರವರ್ತಿ ನಾಡಿಗೆರ ಕೃಷ್ಣರಾಯರ ಸ್ಮಾರಕ ಪ್ರಶಸ್ತಿ( ಅತ್ಯುತ್ತಮ ಲೇಖನಕ್ಕೆ): ಝಕ್ರೀಯಾ, ಸುವರ್ಣಟೈಮ್ಸ್ ಆಫ್ ಕರ್ನಾಟಕ, ಸಿ.ಎಸ್ ಬೋಪಯ್ಯ  ಹಿರಿಯ ಪತ್ರಕರ್ತರು

ಅಪ್ಪಾಜಿ ಸ್ಮಾರಕ ಪ್ರಶಸ್ತಿ (ಅತ್ಯುತ್ತಮ ಚಲನ ಚಿತ್ರ ವರದಿಗೆ); ಶ್ರೀಶರಣು ಹೊನ್ನೂರು ವಿಜಯ ಕರ್ನಾಟಕ ಬೆಂಗಳೂರು.

 

Leave a Reply

Your email address will not be published.

Social Media Auto Publish Powered By : XYZScripts.com