RSS ನಿಷೇಧಿಸಲು ನೆಹರು, ಇಂದಿರಾರಿಂದಲೇ ಸಾಧ್ಯವಾಗಿಲ್ಲ, ಇನ್ನು ಈ CM ಯಾವ ಲೆಕ್ಕ : BSY

ಸಿರಾ: ಭಜರಂಗದಳ ಹಾಗೂ ಆರ್‌ಎಸ್‌ಎಸ್‌ ಸಂಘಟನೆಗಳಿಗೆ ನಿಷೇಧ ಹೇರಲು ನೆಹರೂ ಹಾಗೂ ಇಂದಿರಾಗಾಂಧಿಯವರಿಂದಲೇ ಸಾಧ್ಯವಾಗಲಿಲ್ಲ. ಇನ್ನು ಈ ಸಿದ್ದರಾಮಯ್ಯ ಮಾಡಲು ಸಾಧ್ಯವೇ ?. ಅವರೊಬ್ಬ ಬಚ್ಚಾ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌ ಯಡಿಯೂರಪ್ಪ, ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತುಮಕೂರಿನಲ್ಲಿ ನಡೆದ ಬಿಜೆಪಿಯ ನವಕರ್ನಾಟಕ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಯಡಿಯೂರಪ್ಪ, ಬಿಜೆಪಿ, ಆರ್‌ಎಸ್‌ಎಸ್‌, ಭಜರಂಗದಳ ಸಂಘಟನೆಗಳ ಕಾರ್ಯಕರ್ತರು ಉಗ್ರರಾಗಿದ್ದರೆ ಅಂತಹವರನ್ನು ತಾಕತ್ತಿದ್ದರೆ ಬಂಧಿಸಿ. ಮತ್ಯಾಕೆ ಸುಮ್ಮನೆ ತಿರುಗಾಡಲು ಬಿಟ್ಟಿದ್ದೀರಿ. ಸಿಎಂ ಸಿದ್ದರಾಮಯ್ಯ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ನಿಜವಾಗಿಯೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ದೇಶಭಕ್ತರು. ಸಿದ್ದರಾಮಯ್ಯನಿಗೆ ಸೊಕ್ಕು ಹೆಚ್ಚಾಗಿದೆ. ತಲೆ ತಿರುಕು ಹುಚ್ಚು ಮುಖ್ಯಮಂತ್ರಿ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಮನ ಭಕ್ತ ಹನುಮನ ನಾಡಿನಲ್ಲಿ ಸಿದ್ದರಾಮಯ್ಯ ರಾವಣನಂತೆ ಇದ್ದಾರೆ. ಮೀನು ತಿಂದು ಧರ್ಮಸ್ಥಳಕ್ಕೆ ಹೋಗುವ ಇವರು ಎಂಥಾ ದೈವ ಭಕ್ತರು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ನನ್ನ ಹೆಸರಿನಲ್ಲೂ ರಾಮನಿದ್ದಾನೆ ಎನ್ನುತ್ತಾರೆ. ಆದರೆ ರಾಮನಿಗೆ ಅಪಚಾರ ಎಸಗುವ ರೀತಿ ಮಾತನಾಡುತ್ತಾರೆ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com