10 ರೂ ಕೊಡ್ತೀನಿ ಬಾ ಅಂದ ಪೇದೆ, ಏನೂ ಅರಿಯದೆ ಬಂದ ಮಗುವಿಗೆ ಆತ ಮಾಡಿದ್ದೇನು ?

ನೋಯ್ಡಾ : ಚಿಕ್ಕ ವಯಸ್ಸಿನ ಮಕ್ಕಳಿಗೆ ಏನೂ ತಿಳಿಯುವುದಿಲ್ಲ. ಇದನ್ನೇ ಬಳಸಿಕೊಂಡ ಅನೇಕರು ಮಕ್ಕಳ ಮೇಲೆ ದೌರ್ಜನ್ಯ ಎಸಗುತ್ತಿರುವ ಪ್ರಕರಣ ದಿನನಿತ್ಯ ಕೇಳಿಬರುತ್ತಿದೆ. ಅಂತೆಯೇ ಏಳು ವರ್ಷದ ಬಾಲಕಿಗೆ 10 ರೂಪಾಯಿ ಆಸೆ ತೋರಿಸಿ ಪೊಲೀಸ್‌ ಪೇದಯೇ ಅತ್ಯಾಚಾರ ನಡೆಸಿದ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ಬೆಳಕಿಗೆ ಬಂದಿದೆ.

ಸುಭಾಷ್‌ ಸಿಂಗ್‌ (45) ಪ್ರಕರಣದ ಆರೋಪಿಯಾಗಿದ್ದು, ನೋಯ್ಡಾದ ಬುದ್ದ ನಗರ ತೆರಿಗೆ ಇಲಾಖೆ ಬಳಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.

ಬುಧವಾರ ಬೆಳಗ್ಗೆ ಸೂರಜ್‌ಪುರ ಎಂಬಲ್ಲಿ ಬಾಲಕಿಯನ್ನು ತನ್ನ ಅಪಾರ್ಟ್‌ಮೆಂಟ್‌ಗೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾನೆ. ಈ ವೇಳೆ ಬಾಲಕಿ ಕಿರುಚಿಕೊಂಡಿದ್ದು, ಬಾಲಕಿಯ ಕಿರುಚಾಟ ಕೇಳಿದ ಸಾರ್ವಜನಿಕರು ಆಕೆಯನ್ನು ಕಾನುಕನ ಕೈಯಿಂದ ರಕ್ಷಿಸಿದ್ದಾರೆ. ಪೇದೆಗೆ ಸ್ಥಳೀಯರು ಥಳಿಸಿದ್ದು, ಬಳಿಕ ನೋಯ್ಡಾ ಪೊಲೀಸರಿಗೆ ಆರೋಪಿಯನ್ನು ಒಪ್ಪಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com