In photos : ಮಗಳು ಝೀವಾಳ ಶಾಲಾ ವಾರ್ಷಿಕೋತ್ಸವದಲ್ಲಿ ಮಿಂಚಿದ ಅಪ್ಪ ಧೋನಿ

ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್‌ ಧೋನಿ ಸದ್ಯ ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿದ್ದಾರೆ. ಸಿಗುವ ಅಲ್ಪ ಸಮಯದಲ್ಲೇ ಮಗಳ ಜೊತೆ ಎಂಜಾಯ್‌ ಮಾಡುವ ಧೋನಿ  ಈ ಬಾರಿ ಮಗಳು ಝೀವಾ ಜೊತೆಗಿರುವ ಫೋಟೋ ಒಂದನ್ನು ಇನ್ಸ್‌ಟ್ರಾ ಗ್ರಾಂನಲ್ಲಿ ಅಪ್‌ ಲೋಡ್‌ ಮಾಡಿದ್ದಾರೆ.

ಮಗಳ ಮೊದಲ ಶಾಲಾ ವಾರ್ಷಿಕೋತ್ಸವದ ಬಳಿಕ ಎಂಬ ಶೀರ್ಷಿಕೆಯಡಿ ಮಗಳ ಜೊತೆಗಿರುವ ಫೋಟೋ ಹಾಕಿದ್ದಾರೆ. ಬ್ಲಾಕ್‌ ಬ್ಲೇಸರ್‌ನಲ್ಲಿ ಧೋನಿ ಹಾಗೂ ಕೆಂಪು ಡ್ರೆಸ್‌ ತೊಟ್ಟ ಝೀವಾ ಅಪ್ಪನ ಜೊತೆ ಕಾಲ ಕಳೆದಿದ್ದಾಳೆ.

ಝೀವಾಳ ಶಾಲಾ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದ ಧೋನಿ ಅಲ್ಲಿನ ಕ್ಷಣಗಳು ಹಾಗೂ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದಲ್ಲದೆ, ಪತ್ನಿ ಸಾಕ್ಷಿ ಧೋನಿ ಸಹ ಝೀವಾಳ ಡಾನ್ಸನ್ನು ಇನ್ಸ್ಟಾಗ್ರಾಂಗೆ ಹಾಕಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com