ರಾಮ್‌ ಗೋಪಾಲ್‌ ವರ್ಮಾ ಸಿನಿಮಾದಲ್ಲಿ ಹಾಲಿವುಡ್‌ನ ಪೋರ್ನ್‌ ಸ್ಟಾರ್‌

ಸದಾ ಒಂದಿಲ್ಲೊಂದು ವಿವಾದದಲ್ಲಿ ಸುದ್ದಿಯಾಗುವ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಹೌದು ಹಾಲಿವುಡ್‌ನ ಪೋರ್ನ್ ಸ್ಟಾರ್‌ ಒಬ್ಬರಿಗೆ ರಾಮ್‌ ಗೋಪಾಲ್‌ ವರ್ಮಾ ನಿರ್ದೇಶನ ಮಾಡಲು ಸಜ್ಜಾಗುತ್ತಿದ್ದು. ಈಗಾಗಲೆ ಆಕೆಯ ಜೊತೆ ಮಾತುಕತೆಯನ್ನೂ ನಡೆಸಿದ್ದಾರೆ.

ಇದು ರಾಂ ಗೋಪಾಲ್‌ ವರ್ಮಾ ಅವರ ವಿಭಿನ ಪ್ರಾಜೆಕ್ಟ್ ಆಗಿದ್ದು, ಪೋರ್ನ್‌ ಸ್ಟಾರ್‌ ಜೊತೆ ವಿಡಿಯೊ ಒಂದನ್ನು ಚಿತ್ರೀಕರಿಸಿದ್ದಾರೆ. ಈ ವಿಚಾರವನ್ನು ಟ್ವಿಟರ್‌ ಮೂಲಕ ಬಹಿರಂಗಪಡಿಸಿರುವ ರಾಂ ಗೋಪಾಲ್‌ ವರ್ಮಾ, ಹಾಲಿವುಡ್‌ನ ಪೋರ್ನ್‌ ನಟಿ ಮಿಯಾ ಮಲ್ಕೋವಾ ಎಂಬ ನಟಿಯ ಜೊತೆ ಮಾತುಕತೆ ನಡೆಸಿದ್ದೇನೆ. ಸಿನಿಮಾಗೆ ಗಾಡ್‌ ಸೆಕ್ಸ್‌ ಅಂಡ್‌ ಟ್ರೂತ್‌ ಎಂಬ ಹೆಸರಿಡಲಾಗಿದೆ ಎಂದಿದ್ದಾರೆ.

ಅಲ್ಲದೆ ನೀನು ಸುಂದರ ಕಲಾಕೃತಿಯಾದರೆ ನಾನೊಬ್ಬ ಫ್ರೇಮ್ ಮೇಕರ್ ಎಂದು ವರ್ಮಾ ಹೇಳಿದ್ದಾರೆ. ಇನ್ನು ಈ ಕುರಿತು ಮಲ್ಕೋವಾ ಸಹ ಟ್ವೀಟ್‌ ಮಾಡಿದ್ದು, ಭಾರತೀಯ ಚಿತ್ರರಂಗದಲ್ಲಿ ಕೆಲಸ ಮಾಡಲು ಸಂತೋಷವೆನಿಸುತ್ತಿದೆ. ಸನ್ನಿ ಲಿಯೋನ್‌ ಬಳಿಕ ಪೋರ್ನ್‌ ನಟಿಯಾಗಿ ಭಾರತಕ್ಕೆ ಕಾಲಿಡುತ್ತಿರುವ ನಟಿ ಎಂಬ ಹೆಮ್ಮೆ ನನಗಿದೆ ಎಂದಿದ್ದಾರೆ. ಸಿನಿಮಾದ ಟ್ರೇಲರ್‌ ಜನವರಿ 16ರಂದು ಬಿಡುಗಡೆಯಾಗಲಿದೆ.

Leave a Reply

Your email address will not be published.