ನೀವು whats app ಬಳಕೆದಾರರಾಗಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ…

ದೆಹಲಿ : ವಿಶ್ವದ ಜನರ ಮನೆಮಾತಾಗಿರುವ ವಾಟ್ಸಾಪ್‌ ದಿನಕ್ಕೊಂದು ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಿದೆ. ಈ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿದೆ. ಈಗ ವಾಟ್ಸಾಪ್‌ ಮತ್ತೊಂದು ಹೊಸ ಫೀಚರನ್ನು ಪರಿಚಯಿಸಿದೆ. ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಒಬ್ಬ ಅಡ್ಮಿನ್‌ ಉಳಿದ ಅಡ್ಮಿನಿಸ್ಟ್ರೇಟರ್‌ಗಳನ್ನು ಡಿಮೋಟ್ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ.

ಅವರನ್ನು ಗ್ರೂಪಿನಿಂದ ಡಿಲೀಟ್‌ ಮಾಡದೆ ಅಥವಾ ರಿಮೂವ್‌ ಮಾಡದೆಯೇ ಡಿಮೋಟ್‌ ಮಾಡಬಹುದಾಗಿದೆ. ಇದಕ್ಕಾಗಿ ಅಡ್ಮಿನ್ ಎಂಬ ಸ್ಟೇಟಸನ್ನು ತೆಗೆದು ಹಾಕಿದರೆ ಸಾಕು. ತಾನಾಗಿಯೋ ಡಿಮೋಟ್‌ ಆಗುತ್ತದೆ. ವಾಟ್ಸಾಪ್‌ನ ಗ್ರೂಪ್‌ ಇನ್ಫೋ ಸೆಕ್ಷನ್‌ನಲ್ಲಿ ಡಿಸ್ಮಿಸ್‌ ಆ್ಯಸ್‌ ಅಡ್ಮಿನ್‌ ಎಂಬ ಆಪ್ಷನ್‌ ಕೊಡಲಾಗಿದೆ. ಅದರ ಮೇಲೆ ಕ್ಲಿಕ್‌ ಮಾಡಿ ಅಡ್ಮಿನ್‌ ಸ್ಟೇಟಸನ್ನು ಡಿಮೋಟ್‌ ಮಾಡಬಹುದು.

ಐಒಎಸ್ ಹಾಗೂ ಆ್ಯಂಡ್ರಾಯ್ಡ್‌ ಫೋನ್‌ನಲ್ಲಿ ಈ ಆಪ್ಷನ್‌ ಲಭ್ಯವಿರಲಿದೆ. ಸದ್ಯ ವಾಟ್ಸಾಪ್‌, ಐಒಎಸ್‌ನಲ್ಲಿ ಇದನ್ನು ಅಭಿವೃದ್ಧಿ ಪಡಿಸುತ್ತಿದೆ.

 

Leave a Reply

Your email address will not be published.

Social Media Auto Publish Powered By : XYZScripts.com