ಒಬ್ಬ ಹಿಂದೂ ವ್ಯಾಘ್ರನಾಗಬಹುದೇ ಹೊರತು ಉಗ್ರನಾಗಲು ಸಾಧ್ಯವಿಲ್ಲ : C.T ರವಿ

ಚಿಕ್ಕಮಗಳೂರು ; ಭಯೋತ್ಪಾದನೆ ಮಾಡುವಂತೆ ಮಾತನಾಡುವುದೂ ಭಯೋತ್ಪಾದನೆ. ಅಂದರೆ ಸಿದ್ದರಾಮಯ್ಯ ಸಹ ಒಬ್ಬ ಭಯೋತ್ಪಾದಕ ಎಂದು ಬಿಜೆಪಿ ನಾಯಕ ಸಿ.ಟಿ ರವಿ ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿ ಭಯ ಸೃಷ್ಠಿಸುವುದೇ ಭಯೋತ್ಪಾದನೆ. ಭಯವನ್ನು ಹುಟ್ಟುಹಾಕುವ ರೀತಿಯಲ್ಲಿ ಮಾತನಾಡುವವನೇ ಭಯೋತ್ಪಾದಕ. ಅಂದರೆ ಸಿಎಂ ಒಬ್ಬ ಭಯೋತ್ಪಾದಕ. ಏಕೆಂದರ್ ಅವರ ಮಾತಿನಲ್ಲಿ ಬೆದರಿಕೆ ಇದೆ. ದುರಹಂಕಾರವಿದೆ ಎಂದಿದ್ದಾರೆ.

ನಾವು ಎಂದಿಗೂ ದುರಹಂಕಾದಿಂದ ಮಾತನಾಡಿಲ್ಲ. ಯಾರನ್ನೂ ಬೆದರಿಸಿಲ್ಲ. ಸತ್ಯದ ಪರ ಹೋರಾಟ ಮಾಡಿದ್ದೇವೆ. ಅದನ್ನೇ ಭಯೋತ್ಪಾದನೆ ಎಂದರೆ ನಾವೇನು ಮಾಡಲು ಸಾಧ್ಯ. ಸತ್ಯದ ಪರ ಹೋರಾಟ ಮಾಡುವವರಿಗೆ ಭಯೋತ್ಪಾದಕರು ಎಂದರೆ ಅದ್ಯಾವ ಡಿಕ್ಷನರಿಯನ್ನು ಸಿಎಂ ಓದಿಕೊಂಡಿದ್ದಾರೋ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ತಾಲಿಬಾನ್‌ ಹಾಗೂ ನಕ್ಸಲ್‌ ಜೊತೆ ನಂಟು ಇಟ್ಟುಕೊಂಡು ಓಟ್‌ ಬ್ಯಾಂಕ್‌ ರಾಜಕಾರಣ ಮಾಡುತ್ತಾರೆ. ಹಿಂದು ವ್ಯಕ್ತಿ ಎಂದಿಗೂ ಉಗ್ರನಾಗಲು ಸಾಧ್ಯವಿಲ್ಲ. ಹಿಂದೂ ವ್ಯಾಘ್ರನಾಗಬಹುದೇ ಹೊರತು ಉಗ್ರನಾಗುವುದಿಲ್ಲ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com