WATCH : ಪರಿವರ್ತನಾ ಯಾತ್ರೆಗೆ ಹುಡುಗಿಯರನ್ನು ಕುಣಿಸಿ ಜನ ಸೇರಿಸಿದ ಕಾರ್ಯಕರ್ತರು !!

ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ಗೌರಿ ಬಿದನೂರಿನಿಂದ ಬಿಜೆಪಿ ಪರಿವರ್ತನಾ ಯಾತ್ರೆ ಆರಂಭಗೊಂಡಿದ್ದು, ಅದಕ್ಕೆ ಜನರನ್ನು ಸೇರಿಸುವ ಸಲುವಾಗಿ ಹುಡುಗಿಯರಿಂದ ಅಶ್ಲೀಲ ಡಾನ್ಸ್‌ ಮಾಡಿಸಲಾಗಿದೆ.

ಬಾಗೇಪಲ್ಲಿಯ ಜನರನ್ನು ಸೆಳೆಯಲು ಬಿಜೆಪಿ ಮುಖಂಡ ಅರಿಕೆರೆ ಸಿ. ಕೃಷ್ಣಾರೆಡ್ಡಿ ಅವರು ಸಾರ್ವಜನಿಕ ಕಾರ್ಯಕ್ರಮಕ್ಕಾಗಿ ಸಿದ್ಧಪಡಿಸಿದ್ದ ವೇದಿಕೆ ಮೇಲೆ ಬೆಳಗ್ಗೆಯಿಂದಲೇ ಆರ್ಕೆಸ್ಟ್ರಾ ನಡೆಸಿದ್ದರು. ಈ ವೇಳೆ ಹುಡುಗಿಯರು ಮಾದಕ ರೀತಿಯಲ್ಲಿ ಹೆಜ್ಜೆ ಹಾಕಿದ್ದಾರೆ. ಇದನ್ನು ನೋಡಲು ನೂರಾರು ಮಂದಿ ಸೇರಿದ್ದು, ಶಿಳ್ಳೆ, ಕೇಕೆ ಹೊಡೆಯುವದರ ಮೂಲಕ ಯುವತಿಯರಿಗೆ ಸಾಥ್‌ ನೀಡಿದರು.

ಬಹಿರಂಗ ವೇದಿಕೆಯಲ್ಲಿ ಅಶ್ಲೀಲ ನೃತ್ಯ ನೋಡಿ ಅನೇಕರು ವಿರೋಧ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ಆರ್ಕೆಸ್ಟ್ರಾ ಕಾರ್ಯಕ್ರಮದಿಂದಾಗಿ ನಿಗದಿಯಂತೆ ನಡೆಯಬೇಕಿದ್ದ ಪರಿವರ್ತನಾ ಯಾತ್ರೆ ಒಂದೂವರೆ ಗಂಟೆ ತಡವಾಗಿ ನಡೆಯಿತು. ತಡವಾದ ಕಾರಣ ಜನರೆಲ್ಲ ಹೊರಡಬಹುದು ಎಂಬ ಕಾರಣದಿಂದ ಹುಡುಗಿಯರ ನೃತ್ಯವನ್ನು ಆಯೋಜಿಸಲಾಗಿತ್ತು. ಬಿಜೆಪಿ ತನ್ನ ಪರಿವರ್ತನಾ ಯಾತ್ರೆಗಾಗಿ ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದಿತ್ತು ಎಂದು ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com