ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್‌ ಸುದ್ದಿ : ಕೆಲಸ ಕಡಿಮೆ, ಸಂಬಳ ಜಾಸ್ತಿ ಮಾಡಿದ ಸರ್ಕಾರ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಉಡುಗೊರೆ ನೀಡಿದೆ.

ಎಂ.ಆರ್‌ ಶ್ರೀನಿವಾಸಮೂರ್ತಿ ನೇತೃತ್ವದ ಆರನೇ ವೇತನ ಆಯೋಗ ನೀಡಿರುವ ವರದಿಯನ್ನು ಜಾರಿಗೊಳಿಸಲು ಸಿದ್ದರಾಮಯ್ಯ ನಿರ್ಧರಿಸಿರುವುದಾಗಿ ಹೇಳಲಾಗಿದೆ. ಜನವರಿ ಅಂತ್ಯಕ್ಕೆ ಆಯೋಗದ ಅವಧಿ ಕೊನೆಗೊಳ್ಳಲಿದ್ದು, ಅದಕ್ಕೂ ಮುನ್ನ ವರದಿ ಮಂಡನೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಈ ವರದಿ ಜಾರಿಯಾದರೆ 6 ಲಕ್ಷ ಸರ್ಕಾರಿ ನೌಕರರ ಕುಟುಂಬದ ಮತಗಳನ್ನು ಗಳಿಸಿಕೊಳ್ಳುವ ಸಾಧ್ಯತೆ ಇದೆ. 6ನೇ ವೇತನ ಆಯೋಗದ ಸಂಭವನೀಯ ವರದಿ ಪಟ್ಟಿ ಲಭ್ಯವಾಗಿದ್ದು, ರಾಜ್ಯ ಸರ್ಕಾರಿ ನೌಕರರಿಗೆ ವಾರದಲ್ಲಿ ಐದು ದಿನ ಕೆಲಸ. ಶನಿವಾರ, ಭಾನುವಾರ ರಜೆ. ಕೆಲ ಜಯಂತಿಗಳಿಗೆ ರಜೆ ರದ್ದು. ಕೆಲಸದ ಸಮಯದಲ್ಲಿ ಬದಲಾವಣೆ. ನೌಕರರ ಸಂಬಳದಲ್ಲಿ ಹೆಚ್ಚಳ. ರಾಜ್ಯ ಸರ್ಕಾರಿ ನೌಕರರ ಕನಿಷ್ಠ ವೇತನ 16,350 ರೂ, ಗರಿಷ್ಠ ವೇತನ 1,32,925ರೂ ಎಂದು ತಿಳಿದುಬಂದಿದೆ.

 

Leave a Reply

Your email address will not be published.

Social Media Auto Publish Powered By : XYZScripts.com