ನರೇಂದ್ರ ಮೋದಿ ವಿವೇಕಾನಂದರಂತೆ ವಿಶ್ವಗುರುವಾಗ್ತಾನೆ : ಪ್ರಹ್ಲಾದ್‌ ಮೋದಿ

ಬೆಂಗಳೂರು : ಕಾಂಗ್ರೆಸ್‌ನಾಯಕರಿಗೆ ಪ್ರಧಾನಿ ಮೋದಿಯವರನ್ನ ಟೀಕಿಸಲು ಯಾವ ವಿಚಾರವೂ ಸಿಗುತ್ತಿಲ್ಲ. ಆದ್ದರಿಂದ ಅತ್ತಿಗೆ ಜಶೋದಾ ಬೆನ್‌ಅವರ ವಿಚಾರವಾಗಿ ಮಾತನಾಡುತ್ತಿದ್ದಾರೆ ಎಂದು ಮೋದಿ ಸಹೋದರ ಪ್ರಹ್ಲಾದ್‌ ಮೋಡಿ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಮಾತನಾಡಿದ ಅವರು, ನಾವೂ ಸಹ ಅಣ್ಣ-ಅತ್ತಿಗೆಯನ್ನು ಒಂದು ಮಾಡುವ ಪ್ರಯತ್ನ ಮಾಡುವುದಿಲ್ಲ. ಅಣ್ಣ ತಂದೆಯ ಸಮಾನ, ಅವರ ವೈಯಕ್ತಿಕ ವಿಚಾರದಲ್ಲಿ ನಾವು ತಲೆ ಹಾಕುವುದಿಲ್ಲ. ಅಲ್ಲದೆ ನಮ್ಮ ಕುಟುಂಬದಿಂದ ಇನ್ಯಾರೂ ರಾಜಕೀಯಕ್ಕೆ ಬರುವುದಿಲ್ಲ. ಒಬ್ಬ ಮೋದಿಯೇ ಸಾಕು ಎಂದಿದ್ದಾರೆ.

ನಾನು ಪ್ರಧಾನಿ ಸೋದರನಾದರೂ ಒಂದು ದಿನಸಿ ಅಂಗಡಿ ಇಟ್ಟುಕೊಂಡಿದ್ದೇನೆ. ಇಲ್ಲಿ ದೊಡ್ಡವರು, ಚಿಕ್ಕವರು ಎಂಬುದಿಲ್ಲ ಎಂದಿದ್ದಾರೆ.

ಇದೇ ವೇಳೆ ವಿವೇಕಾನಂದರ ಕುರಿತು ಮಾತನಾಡಿದ ಅವರು, ಹಿಂದೂ ಧರ್ಮ ಎಂದರೆ ಏನು ಎಂದು ತಿಳಿಸಲು ವಿವೇಕಾನಂದರು ಜನ್ಮ ತಾಳಿದರು. ಇವರು ಕೇವಲ ಭಾರತಕ್ಕೆ ಮಾತ್ರ ಸೀಮಿತವಲ್ಲ. ವಿವೇಕಾನಂದ ಹಾಗೂ ಮೋದಿಗೆ ಸಾಮ್ಯತೆಗಳಿವೆ ನರೇಂದ್ರ ಮೋದಿ ವಿಶ್ವಗುರುವಾಗ್ತಾನೆ. ನರೇಂದ್ರ ಎಂಬ ಹೆಸರು ಮತ್ತೆ ಭಾರತದಲ್ಲಿ ಪ್ರತಿಧ್ವನಿಸುತ್ತದೆ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com