ಇನ್ಮುಂದೆ ಉತ್ತರಾ ಖಂಡ್‌ನ ಎಲ್ಲಾ ಮದರಸಾಗಳನ್ನು ಸಂಸ್ಕೃತ ಕಡ್ಡಾಯ !

ಲಖನೌ : ಮುಂದಿನ ಶೈಕ್ಷಣಿಕ ವರ್ಷದಲ್ಲಿ ಉತ್ತರಾ ಖಂಡ್‌ನ ಎಲ್ಲಾ  ಮದರಸಾಗಳ ಪಠ್ಯ ಪುಸ್ತಕದಲ್ಲಿ ಸಂಸ್ಕೃತ ವಿಷಯ ಹಾಗೂ ಕಂಪ್ಯೂಟರ್ ವಿಜ್ಞಾನವನ್ನು ಸೇರಿಸಲು ಉತ್ತರಾ ಖಂಡ್ ಎಜುಕೇಶನ್‌ ಬೋರ್ಡ್‌ ನಿರ್ಧರಿಸಿದೆ.

ರಾಜ್ಯದಲ್ಲಿ ಪ್ರಸ್ತುತ 297 ನೋಂದಾಯಿತ ಮದರಸಾಗಳಿದ್ದು, ಈ ಎಲ್ಲಾ ಮದರಸಾಗಳಿಗೆ ಗಣಿತ, ಆಯುಷ್‌ ಹಾಗೂ ಸಾಮಾಜಿಕ ವಿಜ್ಞಾನವನ್ನು ಐಚ್ಛಿಕ ವಿಷಯವನ್ನಾಗಿ ನೀಡಲಾಗುತ್ತದೆ ಎಂದು ಉತ್ತರಾಖಂಡ್‌ನ ಶಿಕ್ಷಣ ನಿರ್ದೇಶಕಿ ಪುಷ್ಪಾ ಜೋಷಿ ಹೇಳಿದ್ದಾರೆ.

ರಾಜ್ಯದ ಎಲ್ಲಾ ಮದರಸಾಗಳಲ್ಲಿ ಸಂಸ್ಕೃತವನ್ನು ಕಡ್ಡಾಯವಾಗಿ ಕಲಿಸಬೇಕೆಂದು ಉತ್ತರಾಖಂಡ್ ಮದರಸಾ ವೆಲ್ ಫೇರ್‌ ಸೊಸೈಟಿ, ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.

 

Leave a Reply

Your email address will not be published.

Social Media Auto Publish Powered By : XYZScripts.com