ಬಸ್‌ನಲ್ಲಿ ಮೃತಪಟ್ಟ ವ್ಯಕ್ತಿಯನ್ನು ರಸ್ತೆ ಪಕ್ಕದಲ್ಲಿ ಇಳಿಸಿ ಹೋದ ಕಂಡಕ್ಟರ್ !!

ಕೃಷ್ಣಗಿರಿ : ತಮಿಳುನಾಡಿನ ರಾಜ್ಯ ರಸ್ತೆ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ನಿರ್ವಾಹಕ, ಶವವನ್ನು ರಸ್ತೆ ಮಧ್ಯೆಯೇ ಇಳಿಸಿ ಹೋದ ಘಟನೆ ವರದಿಯಾಗಿದೆ.
ಬಸ್‌ನಲ್ಲಿ ರಾಧಾಕೃಷ್ಣನ್‌ (43) ಹಾಗೂ ಅವರ ಸ್ನೇಹಿತ  ವೀರನ್‌ (54) ಎಂಬುವವರು ಪ್ರಯಾಣಿಸುತ್ತಿದ್ದರು. ಈ ವೇಳೆ ವೀರನ್‌ ಎಂಬುವವರು ಮೃಪಟ್ಟಿದ್ದಾರೆ. ಆಗ ಬಸ್‌ ಕಂಡಕ್ಟರ್‌ ವೀರನ್‌ ಹಾಗೂ ರಾಧಾಕೃಷ್ಣನ್‌ ಇಬ್ಬರನ್ನು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಇಳಿಸಿ ಅಮಾನವೀಯತೆ ಮೆರೆದಿದ್ದಾರೆ.
 ರಾಷ್ಟ್ರೀಯ ಹೆದ್ದಾರಿಯಲ್ಲಿ ಶವದ ಪಕ್ಕ ರಾಧಾಕೃಷ್ಣನ್‌ ಕುಳಿತಿದ್ದನ್ನು ಕಂಡ ಮಾಧ್ಯಮದವರು ಅವರನ್ನ ಪ್ರಶ್ನಿಸಿದಾಗ ನಡೆದ ಘಟನೆಯನ್ನ ವಿವರಿಸಿದ್ದಾರೆ. ಬೆಂಗಳೂರಿನಲ್ಲಿ ಕಾರ್ಮಿಕರಾಗಿರುವ ಇವರು, ತಮಿಳುನಾಡಿನ ತಿರುವಣ್ಣಾಮಲೈಗೆ ಹೋಗುತ್ತಿದ್ದರು ಎಂದು ತಿಳಿದುಬಂದಿದೆ.
 ನಾವಿಬ್ಬರೂ ತಿರುವಣ್ಣಾಮಲೈಗೆ ಹೋಗುತ್ತಿದ್ದೆವು. ಆದರೆ ದಾರಿ ಮಧ್ಯೆ ವೀರನ್‌ಗೆ ಈ ರೀತಿ ಆಗಿದೆ. ಹಣ ವಾಪಸ್‌ ಕೊಡುವಂತೆ ಕೇಳಿದರೂ ಕಂಡಕ್ಟರ್ ಹಣ ನೀಡಲಿಲ್ಲ. ಬೇರೆ ಯಾವುದಾದರೂ ವಾಹನ ಬರಬಹುದೆಂದು ಕಾಯುತ್ತಿರುವುದಾಗಿ ರಾಧಾಕೃಷ್ಣನ್‌ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

Leave a Reply

Your email address will not be published.