ಬಾಲಿವುಡ್‌ ಬೆಡಗಿ ಸೋನಂ ಕಪೂರ್‌ಗೆ ಕೂಡಿಬಂತು ಕಂಕಣಭಾಗ್ಯ : ವರನ್ಯಾರು…?

ಮುಂಬೈ : ಮದುವೆ ಎಂದ ಕೂಡಲ ತಕ್ಷಣವೇ ನೆನಪಾಗುವುದ ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ. ಇಟಲಿಯಲ್ಲಿ ಮದುವೆ ಮುಗಿದು ಭಾರತಕ್ಕೆ ಮರಳಿದ್ದರೂ ಎಲ್ಲೆಡೆ ಅವರಿಬ್ಬರ ಮದುವೆಯ ಮಾತು ಇನ್ನೂ ಮುಗಿದಿಲ್ಲ. ಈ ಮಧ್ಯೆ ಮತ್ತೊಬ್ಬ ಬಾಲಿವುಡ್‌ನ ಬೆಡಗಿ ಮದುವೆ ವಿಚಾರವಾಗಿ ಮಾತನಾಡಿದ್ದಾರೆ.

ಹೌದು ಈಗ ಸೋನಂ ಕಪೂರ್‌ ಸುದ್ದಿಯಲ್ಲಿದ್ದಾರೆ. ಎಸ್‌ ಐ ವಿಲ್‌ ಮ್ಯಾರಿ ಆನಂದ್‌ ಎಂದು ಸೋನಂ ಹೇಳಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಈ ಸುದ್ದಿ ಹರಿದಾಡುತ್ತಿದೆ. ನಾನು ನನ್ನ ನಟನಾ ವೃತ್ತಿಗೆ ಬಂದು 10 ವರ್ಷವಾಗಿದೆ. ಆದರೆ ಇದುವರೆಗೂ ನನ್ನ ವೈಯಕ್ತಿಕ ವಿಚಾರವನ್ನು ಇದುವರೆಗೂ ಹೇಳಿಕೊಂಡಿಲ್ಲ. ಅದು ನನಗೆ ಇಷ್ಟವಾಗುವುದೂ ಇಲ್ಲ ಎಂದಿದ್ದರು. ಆದರೆ ಈಗ ಅವರೇ ತಮ್ಮ ಮದುವೆ ಬಗ್ಗೆ ಬಾಯಿ ಬಿಟ್ಟಿದ್ದು, ನನ್ನ ಮದುವೆ ವಿಚಾರ ಹೆಚ್ಚು ವೈರಲ್‌ ಆಗಬಾರದು ಎಂಬ ಕಾರಣಕ್ಕೆ ನೇರವಾಗಿಯೇ ಮದುವೆಯಾಗುವುದಾಗಿ ಹೇಳಿದ್ದಾರೆ.

ರಾಜಸ್ಥಾನದಲ್ಲಿ ಸೋನಂ ಆನಂದ್‌ ಅವರನ್ನ ವರಿಸಲಿದ್ದಾರೆ. ಇವರ ಮದುವೆಗೆ ಆಪ್ತ ವಲಯದ 300 ಮಂದಿ ಮಾತ್ರ ಸೇರಲಿದ್ದಾರೆ. ಸದ್ಯಕ್ಕೆ ಇಷ್ಟು ಮಾತ್ರ ಹೇಳುತ್ತೇನೆ. ಮುಂದಿನ ವಿಚಾರಗಳನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com