ಹಣ ತರ್ಲಿಲ್ಲ, 15 ಲಕ್ಷ ಕೊಡ್ಲಿಲ್ಲ, ಬೋಗಸ್‌ ಮಾತಾಡೋದು ಬಿಡ್ಲಿಲ್ಲ : ಮೋದಿ ವಿರುದ್ದ ಖರ್ಗೆ ಕಿಡಿ

ಕಲಬುರಗಿ : ಗ್ರಾಮೀಣ ಮತ ಕ್ಷೇತ್ರದ ಸಿರಗಾಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಮಾವೇಶದಲ್ಲಿ ಮೋದಿ‌ ವಿರುದ್ಧ ಸಂಸದ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ನೋಟ್ ಬ್ಯಾನ್ ಎಫೆಕ್ಟ್ ಜನಸಾಮಾನ್ಯರ ಮೇಲೆ ಆಗಿದೆ ಹೊರತು ಶ್ರೀಮಂತರ ಪರವಾಗಿ ಅನುಕೂಲವಾಗಿದೆ. ಯುದ್ದದಲ್ಲೂ ಸಾಯಲ್ಲ ಅಷ್ಟೊಂದು ಜನ ಈ ನೋಟ್ ಬ್ಯಾನ್ ಸಂದರ್ಭದಲ್ಲಿ ಜನ ಸಾಮಾನ್ಯರು ಬ್ಯಾಂಕ್ ಮುಂದೆ ಕ್ಯೂನಿಂತು ಮೃತಪಟ್ಟಿದ್ದಾರೆ. ಮೋದಿಯವರದ್ದು ಬರೀ ಸುಳ್ಳು‌ ಹೇಳೋದೆ ಕೆಲಸವಾಗಿದೆ. ಚುನಾವಣೆ ಮೊದಲು‌ ಕಪ್ಪು ಹಣ ತರುತ್ತೇನೆ. 15ಲಕ್ಷ ಅಕೌಂಟ್ ಗೆ ಹಾಕುತ್ತೇನೆ ಎಂದಿದ್ದರು. ಆದರೆ ಮೋದಿ ಹೊರಗಿನಿಂದ ಹಣ ತರಲಿಲ್ಲ.  15ಲಕ್ಷ ಕೊಡಲಿಲ್ಲ. ಬೋಗಸ್ ಮಾತಾಡೊದು ಬಿಡಲಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.

ಬಿಜೆಪಿಯವರು ಸಮಾಜ‌ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿದ್ದವರ್ಯಾರು ಹಿಂದು ಅಲ್ವಾ, ಸಿದ್ದರಾಮ ಹಿಂದು ಅಲ್ವಾ ಬಿಜೆಪಿಯವರೇನು ನಮಗೆ ಸರ್ಟಿಫಿಕೇಟ್ ಕೊಡಬೇಕಾ ಎಂದು ಪ್ರಶ್ನಿಸಿದ್ದಾರೆ. ಯುಪಿ ಸಿಎಂ ಯೋಗಿ‌ ಆದಿತ್ಯನಾಥ್‌ ಅವರಿಗೆ ಟಾಂಗ್ ಕೊಟ್ಟ ಖರ್ಗೆ ಕರ್ನಾಟಕಕ್ಕೆ ಬಂದಾಗ ಇಲ್ಲಿ ಭೀಫ್ ತಿನ್ನೊದು ಬಂದ್ ಮಾಡಿ, ಗೋ ಹತ್ಯೆ ನಿಷೇಧ ಮಾಡಿ ಎನ್ನುತ್ತಾರೆ. ಆದ್ರೇ ಇವರದೇ ಸಿಎಂ ಇರುವ ಗೋವಾದಲ್ಲಿ ಎಲ್ಲವನ್ನೂ ತಿನ್ನಲು ಅವಕಾಶ ಇದೆ. ಮೊದಲು ಅಲ್ಲಿ‌ ಬಂದ್ ಮಾಡಿಸಿ ಆ ನಂತರ ಸಿದ್ದರಾಮಯ್ಯಗೆ ಬಂದು ಹೇಳಿ ಎಂದಿದ್ದಾರೆ.

ಚುನಾವಣೆ ಆರಂಭವಾಗಿದೆ ಯೋಗಿಯಂತವರು‌ ಕರ್ನಾಟಕಕ್ಕೆ ಬರಲು ಶುರು ಮಾಡಿದ್ದಾರೆ. ಇವರು ಇಲ್ಲ ಸಲ್ಲದ‌ ಮಾತುಗಳನ್ನು ಹೇಳಿ ನಿಮ್ಮನ್ನ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಾರೆ ಅದಕ್ಕೆ ನೀವು ಹುಷಾರಾಗಿರಿ ಎಂದು ಮತದಾರರಿಗೆ ಕರೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com