Distinctionನಲ್ಲಿ ತೇರ್ಗಡೆಯಾದ ಉಗ್ರ ಅಫ್ಜಲ್‌ ಗುರು ಪುತ್ರ ಘಲಿಬ್‌ ಗುರು

ಶ್ರೀನಗರ : ಉಗ್ರ ಅಫ್ಜಲ್‌ ಗುರುನ ಪುತ್ರ ಘಲಿಬ್ ಗುರು ದ್ವಿತೀಯ ಪಿಯಿಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದಾನೆ.

ಜಮ್ಮು-ಕಾಶ್ಮೀರದ ಬೋರ್ಡ್‌ ಆಫ್‌ ಸ್ಕೂಲ್‌ ಎಜುಕೇಶನ್‌ನ 12ನೇ ತರಗತಿಯ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಪರೀಕ್ಷೆಯಲ್ಲಿ 441 ಅಂಕಗಳನ್ನು ಪಡೆದು ತೇರ್ಗಡೆಯಾಗಿದ್ದಾನೆ ಎಂದು ತಿಳಿದುಬಂದಿದೆ. ಆದರೆ ಘಲಿಬ್‌ ಮಾತ್ರ ತನಗೆ ಬಂದಿರುವ ಅಂಕದಿಂದ ತೃಪ್ತನಾಗಿಲ್ಲ ಎಂದು ತಿಳಿದುಬಂದಿದೆ. ಆದರೂ ಘಲಿಬ್‌ಗೆ ಸಾವಿರಾರು ಮಂದಿ ಶುಭಾಷಯಗಳನ್ನು ಕೋರಿ ಕರೆ ಮಾಡುತ್ತಿದ್ದಾರೆ ಎಂದು ಮಾದ್ಯಮಗಳು ವರದಿ ಮಾಡಿವೆ.

2001ರಲ್ಲಿ ಸಂಸತ್‌ ಮೇಲೆ ನಡೆದ ದಾಳಿಯಲ್ಲಿ ಅಫ್ಜಲ್‌ ಗುರು ಕೈವಾಡವಿದೆ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಆತನಿಗೆ 2013ರಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಆಗ ಘಲಿಬ್‌ 2 ವರ್ಷದವನಾಗಿದ್ದ ಎಂದು ತಿಳಿದುಬಂದಿದೆ.

 

Leave a Reply

Your email address will not be published.

Social Media Auto Publish Powered By : XYZScripts.com