Whatsapp ನಿಂದ ಹೊಸ ಫೀಚರ್ : ಖಂಡಿತ ಇದು ನಿಮಗೆ ಇಷ್ಟವಾಗುತ್ತೆ

ದೆಹಲಿ : ಸಾಮಾಜಿಕ ಜಾಲತಾಣ ವಾಟ್ಸಾಪ್‌ ಮತ್ತೊಂದು ಹೊಸ ಫೀಚರ್ ಮೂಲಕ ಬಳಕೆದಾರರ ಗಮನ ಸೆಳೆಯಲು ಮುಂದಾಗಿದೆ.
ಪ್ರಸ್ತುತ ಇರುವ ವೀಡಿಯೋ ಕಾಲಿಂಗ್‌ ಸೇವೆಯನ್ನು ಅಪ್‌ಗ್ರೇಡ್‌ ಮಾಡಿದ್ದು. ಇದು ಬಳಕೆದಾರ ವಾಯ್ಸ್‌ ಕಾಲಿಂಗ್‌ನಲ್ಲಿರುವಾಗಲೇ ವಿಡಿಯೋ ಕಾಲಿಂಗ್‌ಗೆ ಶಿಫ್ಟ್‌ ಆಗುವಂತೆ ಮಾಡಲಿದೆ.
ಈ ಹೊಸ ಫೀಚರ್‌ನಿಂದಾಗಿ ಬಳಕೆದಾರರು ವಾಯ್ಸ್‌ ಕಾಲ್‌ ಇದ್ದಾಗ ಕಾಲ್‌ ಕಟ್‌ ಮಾಡದೇ ವಿಡಿಯೋ ಕಾಲ್‌ ಮಾಡಬಹುದು. ಆದರೆ ಈ ಫೀಚರ್‌ ಬಳಕೆಗಾಗಿ ನಾನು ಕರೆ ಮಾಡಲಿಚ್ಛಿಸುವ ವ್ಯಕ್ತಿಯ ಒಪ್ಪಿಗೆ ಬೇಕಾಗುತ್ತದೆ. ಆಗ ಮಾತ್ರ ವಾಯ್ಸ್‌ ಕಾಲಿಂಗ್‌ ವಿಡಿಯೋ ಕಾಲ್‌ ಆಗಿ ಪರಿವರ್ತಿತವಾಗುತ್ತದೆ.
ಸದ್ಯ ಈ ಹೊಸ ಫೀಚರನ್ನು ಇಬ್ಬರು ವ್ಯಕ್ತಿಗಳ ಮಧ್ಯೆ ಮಾತ್ರ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ಗ್ರೂಪ್‌ ಕಾಲಿಂಗ್‌ಗೆ ಮಾರ್ಪಾಟು ಮಾಡುವ ಉದ್ದೇಶ ಇರುವುದಾಗಿ ಸಂಸ್ಥೆ ಹೇಳಿದೆ.

Leave a Reply

Your email address will not be published.

Social Media Auto Publish Powered By : XYZScripts.com