ಚನ್ನಪಟ್ಣದಲ್ಲಿ ಅನಿತಾ ಸ್ಪರ್ಧಿಸ್ತಾರೆ ಅಂತ ಯಾರ್ರೀ ಹೇಳಿದ್ದು : ಸ್ಥಳೀಯ ನಾಯಕರ ವಿರುದ್ದ HDK ಗರಂ

ಚೆನ್ನಪಟ್ಟಣ : ಚನ್ನಪಟ್ಟಣದಲ್ಲಿ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಖಚಿತ ಎಂದು ಹೇಳಿದ್ದ ಸ್ಥಳೀಯ ಜೆಡಿಎಸ್ ಮುಖಂಡರಿಗೆ ಮುಖಂಭಗವಾಗಿದೆ. ಇದುವರೆಗೂ ಚನ್ನಪಟ್ಟಣದಲ್ಲಿ ಅನಿತಾ ಕುಮಾರಸ್ವಾಮಿ ಸ್ಫರ್ಧೆ ಖಚಿತ ಎಂದು ಹೇಳುತ್ತಿದ್ದ ಸ್ಥಳೀಯ ಪಕ್ಷದ ಮುಖಂಡರಿಗೆ ತಲೆಕೆಟ್ಟಿರಬಹುದು. ಅವರು ಯಾರನ್ನ ಕೇಳಿ ಈ ತೀರ್ಮಾನ ಕೈಗೊಂಡಿದ್ದಾರೆ ಎಂದು ಚನ್ನಪಟ್ಟಣದ ಜೆಡಿಎಸ್ ಮುಖಂಡರಿಗೆ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಇಂದು ರಾಮನಗರದಲ್ಲಿ ಖಾರವಾಗಿಯೇ ಪ್ರತಿಕ್ರಿಸಿದರು.

ತಮ್ಮ ಪತ್ನಿ ಅನಿತಾ ಅವರು ಸ್ಪರ್ಧಿಸುವ ಬಗ್ಗೆ ವರಿಷ್ಠರು ತೀರ್ಮಾನ ಮಾಡ್ತಾರೆ. ನಿನ್ನೆ ಚನ್ನಪಟ್ಟಣದಲ್ಲಿ ಜೆಡಿ ಎಸ್ ಮುಖಂಡರು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಅವರಿಗೆ ತಲೆ ಕೆಟ್ಟಿದೆ. ಅವರು ಯಾರನ್ನು ಕೇಳಿ ತೀರ್ಮಾನ ಮಾಡಿದ್ದಾರೆ ನನಗೆ ಗೊತ್ತಿಲ್ಲ. ಇದರ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Leave a Reply

Your email address will not be published.