ರಾಜಕೀಯ ನಾಯಕಿಯಾಗಿ ಅಖಾಡಕ್ಕಿಳಿಯಲಿದ್ದಾರಾ ವಿದ್ಯಾ ಬಾಲನ್‌ ?

ಮುಂಬೈ : ಬಾಲಿವುಡ್‌ನ ಹಾಟ್ ಬೆಡಗಿ ವಿದ್ಯಾಬಾಲನ್‌ ಸದ್ಯದಲ್ಲೇ ಇಂದಿರಾಗಾಂಧಿಯಾಗಲಿದ್ದಾರೆ. ಹೌದು ಇಂದಿರಾ ಗಾಂಧಿ ಅವರ ಬಗ್ಗೆ ಬರೆದಿರುವ ಪುಸ್ತಕವನ್ನು ವಿದ್ಯಾಬಾಲನ್‌ ಪತಿ ಸಿದ್ಧಾರ್ಥ್‌ ರಾಯ್ ಕಪೂರ್‌ ಹಕ್ಕನ್ನು ಖರೀದಿಸಿದ್ದು, ಶೀಘ್ರದಲ್ಲಿಯೇ ಇದು ಸಿನಿಮಾವಾಗಿ ತೆರೆ ಮೇಲೆ ಮೂಡಿಬರಲಿದೆ ಎಂದು ಮೂಲಗಳು ತಿಳಿಸಿವೆ.

ಇಂದಿರಾಗಾಂಧಿ ಅವರ ಬಗ್ಗೆ ಪತ್ರಕರ್ತರೊಬ್ಬರು ಪುಸ್ತಕ ಬರೆದಿದ್ದು, ಈ ಪುಸ್ತಕ ಸಿನಿಮಾವಾಗಲಿದೆ. ಸಿದ್ಧಾರ್ಥ್‌ ಈ ಪುಸ್ತಕದ ಮೇಲೆ ಚಿತ್ರ ನಿರ್ಮಾಣದ ಹಕ್ಕನ್ನು ಪಡೆದಿದ್ದಾರೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ.

ಇನ್ನು ಪತಿ ನಿರ್ಮಾಣದ ಸಿನಿಮಾದಲ್ಲಿ ಪತ್ನಿ ವಿದ್ಯಾಬಾಲನ್ ಮುಖ್ಯಭೂಮಿಕೆಯಲ್ಲಿ ಅಂದರೆ ಇಂದಿರಾ ಗಾಂಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಆದರೆ ಈ ಕುರಿತು ವಿದ್ಯಾಬಾಲನ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಂದಿರಾ ಗಾಂಧಿ ಪಾತ್ರಕ್ಕೆ ವಿದ್ಯಾ ಜೀವ ತುಂಬುತ್ತಾರಾ ಇಲ್ಲವಾ ಎಂಬುದು ಸದ್ಯದಲ್ಲೇ ತಿಳಿಯಲಿದೆ.

Leave a Reply

Your email address will not be published.