45ನೇ ವಸಂತಕ್ಕೆ ಕಾಲಿಟ್ಟ ದ್ರಾವಿಡ್‌ : ಅಪ್ಪನಿಗೆ ಮಗ ಕೊಟ್ಟ ಭರ್ಜರಿ GIFT ಏನು ?

ಕ್ರಿಕೆಟ್‌ನ ದಂತಕತೆ ರಾಹುಲ್‌ ದ್ರಾವಿಡ್ ಇಂದು 45ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ದಿ ವಾಲ್‌ಗೆ ಶುಭಾಷಯಗಳ ಸುರಿಮಳೆಯೇ ಹರಿದುಬರುತ್ತಿದೆ. ಆದರೆ ದ್ರಾವಿಡ್ ಪುತ್ರ ಸಮಿತ್‌ ದ್ರಾವಿಡ್‌ ತಂದೆಯ ಹುಟ್ಟುಹಬ್ಬಕ್ಕೆ ಒಂದು ದಿನ ಮುಂಚಿತವಾಗಿಯೇ ಭರ್ಜರಿ ಗಿಫ್ಟ್‌ ನೀಡಿದ್ದಾರೆ.

ತನ್ನ ಅಪ್ಪನಂತೆ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ಸಮಿತ್‌ ದ್ರಾವಿಡ್‌, ಕೆಎಸ್‌ಸಿಎ ಆಯೋಜಿಸಿರುವ ಬಿಟಿಆರ್‌ ಕಪ್‌ ಅಂಡರ್‌ 14 ಟೂರ್ನಿಯಲ್ಲಿ ಶತಕ ಸಿಡಿಸಿದ್ದಾರೆ. ಮಲ್ಯ ಅದಿತಿ ಇಂಟರ್‌ನ್ಯಾಷನಲ್‌ ಸ್ಕೂಲ್‌ ಪರ ಆಡಿರುವ ಸಮಿತ್‌ 150 ರನ್‌ ಕಲೆ ಹಾಕಿದ್ದರೆ, ಲೆಗ್‌ ಸ್ಪಿನ್ನರ್‌ ಸುನಿಲ್ ಜೋಷಿ ಅವರ ಮಗ ಆರ್ಯನ್‌ ಜೋಷಿ 154 ರನ್‌ ಬಾರಿಸಿದ್ದಾರೆಯ ಇವರಿಬ್ಬರ ಸ್ಫೋಟಕದ ಆಟದ ನೆರವಿನಿಂದಾಗಿ ಅದಿತಿ ಶಾಲೆ 50 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 500ರನ್‌ ಪೇರಿಸಿತ್ತು. ಎದುರಾಳಿಯಾಗಿದ್ದ ವಿವೇಕಾನಂದ ಶಾಲೆಗೆ ಕೇವಲ 88 ರನ್‌ಗಳನ್ನು ಕೊಟ್ಟು 412 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಕ್ರಿಕೆಟ್‌ ಸ್ಟಾರ್‌ಗಳ ಪುತ್ರರ ಆಟ ನೋಡಿದ ಅನೇಕರು ಕರ್ನಾಟಕದಿಂದ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ಗೆ ಇನ್ನಿಬ್ಬರು ಆಟಗಾರರು ಸಿಗುವ ಸಾಧ್ಯತೆ ಇದೆ ಎಂದು ಸೋಶಯಲ್‌ ಮೀಡಿಯಾಗಳಲ್ಲಿ ಅಭಿಪ್ರಾಯ ಪಡುತ್ತಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com