Rape proof ಒಳ ಉಡುಪನ್ನು ತಯಾರಿಸಿದ ಉ.ಪ್ರದೇಶದ ಗ್ರಾಮೀಣ ಯುವತಿ

ಲಖನೌ : ದಿನೇ ದಿನೇ ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಇದನ್ನು ತಪ್ಪಿಸುವ ಸಲುವಾಗಿ ಉತ್ತರ ಪ್ರದೇಶದ ಯುವತಿಯೊಬ್ಬಳು ಅತ್ಯಾಚಾರ ನಿರೋಧಕ ಒಳಉಡುಪನ್ನು ತಯಾರಿಸಿದ್ದಾಳೆ.

4 ಸಾವಿರ ರೂ ಖರ್ಚಿನಲ್ಲಿ ಈ ಒಳಉಡುಪನ್ನು ತಯಾರಿಸಲಾಗಿದ್ದು, ಇದರಲ್ಲಿ ಜಿಪಿಎಸ್‌ ತಂತ್ರಜ್ಞಾನ ಸೇರಿದಂತೆ ಅನೇಕ ತಾಂತ್ರಿಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಉತ್ತರ ಪ್ರದೇಶದ ಫಾರೂಕಾಬಾದ‌್‌ನ ಗ್ರಾಮೀಣ ವಿದ್ಯಾರ್ಥಿನಿ ಸೀನು ಕುಮಾರಿ ಎಂಬಾಕೆ ಈ ಒಳಉಡುಪನ್ನು ತಯಾರಿಸಿದ್ದಾಳೆ. ಈ ಕುರಿತು ಖಾಸಗಿ ಮಾಧ್ಯಮವೊಂದು ವರದಿ ಮಾಡಿದ್ದು, ಈ ಉಡುಪು ಬುಲೆಟ್‌ ಪ್ರೂಫ್‌ ಆಗಿದ್ದು, ಚಾಕುವಿನಿಂದ ಕತ್ತರಿಸಿದರೂ ಹರಿದುಹೋಗುವುದಿಲ್ಲ. ಇದಕ್ಕೆ ಒಂದು ಲಾಕ್‌, ಜಿಪಿಎಸ್‌ ವ್ಯವಸ್ಥೆ ಹಾಗೂ ವಿಡಿಯೋ ಕ್ಯಾಮರಾ ಅಳವಡಿಸಲಾಗಿದೆ. ಈ ಕ್ಯಾಮರಾದಲ್ಲಿ ಅತ್ಯಾಚಾರಿಯ ಮುಖ ರೆಕಾರ್ಡ್ ಆಗುತ್ತದೆ. ಯಾರಾದರು ಅತ್ಯಾಚಾರವೆಸಗಲು ಬಂದರೆ ಜಿಪಿಎಸ್‌ ವ್ಯವಸ್ಥೆ ಪೊಲೀಸರಿಗೆ ಸಂದೇಶ ರವಾನಿಸುತ್ತದೆ. ಅಲ್ಲದೆ ಈ ಒಳಉಡುಪಿನಲ್ಲಿ ಲಾಕ್‌ ವ್ಯವಸ್ಥೆ ಹಾಗೂ ಪಾಸ್‌ವರ್ಡ್‌ ಇದೆ. ಪಾಸ್‌ವರ್ಡ್‌ ಹಾಕಿದರೆ ಮಾತ್ರ ಇದು ತೆರೆಯಲ್ಪಡುತ್ತದೆ.

ಕಾಮುಕರು ಮಹಿಳೆಯರನ್ನು ಚುಡಾಯಿಸಲು ಯತ್ನಿಸಿದರೆ ಜಿಪಿಎಸ್‌ ಕೂಡಲೆ ಪೊಲೀಸರಿಗೆ ಸಂದೇಶ ರವಾನಿಸುತ್ತದೆ ಎಂದು ಸೀನು ಕುಮಾರಿ ಹೇಳಿದ್ದಾಳೆ.

 

Leave a Reply

Your email address will not be published.

Social Media Auto Publish Powered By : XYZScripts.com