ಖುಷಿಗಾಗಿ ಯುವತಿಯ ಮೇಲೆ ಅತ್ಯಾಚಾರವೆಸಗಿ ರಸ್ತೆ ಬದಿ ಎಸೆದ ಕಾಮುಕರು

ಲಖನೌ : ಉತ್ತರ ಪ್ರದೇಶದಲ್ಲಿ ಕಾಮುಕರ ಅಟ್ಟಹಾಸ ಮುಂದುವರಿದಿದೆ. ಬುಲಂದ್ ಶಹರ್‌ನ ಚಾಂದ್‌ ಪುರದಲ್ಲಿ 16 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.

ಇವರು ಖುಷಿಗಾಗಿ ಯುವತಿಯನ್ನು ಅಪಹರಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ಸಿಕಂದರಾಬಾದ್‌ ಪ್ರದೇಶದ ನಿವಾಸಿಗಳಾದ ಜುಲ್ಫೀಕರ್‌ ಮತ್ತು ದಿಲ್ಶಾದ್‌ ಎಂಬುವವರು ಜನವರಿ 3ರಂದು 16ರ ಯುವತಿಯನ್ನು ಅಪಹರಿಸಿ ಚಲಿಸುವ ವಾಹನದಲ್ಲೇ ರಾತ್ರಿಯವರೆಗೂ ಅತ್ಯಾಚಾರವೆಸಗಿದ್ದರು. ಬಳಿಕ ಆಕೆಯನ್ನು ಜೆ.ಬಿ ನಗರ ಜಿಲ್ಲೆಯ ಗ್ರಾಮವೊಂದರಲ್ಲಿ ಎಸೆದು ಹೋಗಿದ್ದರು.

ಸ್ಥಳೀಯರ ಮಾಹಿತಿಯ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ಕೃತ್ಯಕ್ಕೆ ಬಳಸಿಕೊಂಡಿದ್ದ ವಾಹನವನ್ನೂ ವಶಪಡಿಸಿಕೊಳ್ಳಲಾಗಿದೆ.

 

 

Leave a Reply

Your email address will not be published.

Social Media Auto Publish Powered By : XYZScripts.com