ರಶ್ಮಿಕಾ ಮುಂದಿನ ಸಿನಿಮಾದ ಹೀರೋ ಯಾರು ? : ಕೊನೆಗೂ ಸಿಕ್ತು ಉತ್ತರ

ಕಿರಿಕ್‌ ಪಾರ್ಟಿ ಸಿನಿಮಾದ ಮೂಲಕ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟಿರುವ ರಶ್ಮಿಕಾ ಮಂದಣ್ಣ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ರಾಣಿಯಾಗಿ ಮೆರೆಯುತ್ತಿದ್ದಾರೆ. ಕಿರಿಕ್ ಪಾರ್ಟಿ ಯಶಸ್ಸಿನ ಬೆನ್ನಿಗೇ ತೆಲುಗು ಸಿನಿಮಾಗಳನ್ನು ಒಪ್ಪಿಕೊಂಡಿದ್ದಲ್ಲದೆ, ಕನ್ನಡದ ಅಂಜನೀಪುತ್ರ, ಚಮಕ್‌ ಸಿನಿಮಾದಲ್ಲೂ ಮಿಂಚಿದ್ದರು.

ಈಗ ಅವರ ಮುಂದಿನ ಸಿನಿಮಾ ಯಾವುದು ಎಂಬುದರ ಕುರಿತು ಮಾಹಿತಿ ಲಭ್ಯವಾಗಿದೆ. ದರ್ಶನ್‌ ಅವರ 51ನೇ ಸಿನಿಮಾಗೆ ರಶ್ಮಿಕಾ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಹೀಗಂತ ಗಾಂಧಿನಗರದಿಂದ ಮಾತುಗಳು ಕೇಳಿಬರುತ್ತಿವೆ. ಶೈಲಜಾ ನಾಗ್‌ ದರ್ಶನ್‌ ಸಿನಿಮಾದ ನಿರ್ಮಾಪಕರಾಗಿದ್ದು, ಕುರುಕ್ಷೇತ್ರ ಸಿನಿಮಾದ ಬಳಿಕ ದರ್ಶನ್‌ ಮುಂದಿನ ಸಿನಿಮಾ ಸೆಟ್ಟೇರಲಿದೆ.

 

Leave a Reply

Your email address will not be published.