ಮಂಡ್ಯ ಕ್ಷೇತ್ರದ MLA ಅಂಬಿ ಒಬ್ಬ ನಾಮರ್ದ : ಹೀಗಂದಿದ್ಯಾರು ?

ಮಂಡ್ಯ : ಮಾಜಿ ಸಂಸದ, ನಟ ಅಂಬರೀಶ್ ಒಬ್ಬ ನಾಮರ್ದ. ನಮ್ಮ ಕ್ಷೇತ್ರಕ್ಕೆ ಆತ ಏನೂ ಕೆಲಸ ಮಾಡಿಲ್ಲ. ಇಂತಹವರನ್ನು ಆರಿಸಿದ್ದು ನಮ್ಮ ತಪ್ಪು ಎಂದು ಮಂಡ್ಯದ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್‌.ಎನ್‌ ಯೋಗೇಶ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ನಮ್ಮ ಕ್ಷೇತ್ರದ ಎಂಎಲ್‌ಎ ಒಬ್ಬ ನಾಮರ್ದ ಎಂದರೆ ತಪ್ಪಾಗಲಾರದು. ನಮ್ಮ ಕ್ಷೇತ್ರಕ್ಕೆ  ಒಂದೇ ಒಂದು ಶುದ್ದ ನೀರಿನ ಘಟಕ ಸ್ಥಾಪನೆಯಾಗಿಲ್ಲ. ಅವರಿಗೆ ಕ್ಷೇತ್ರದ ಜನರೇ ಚೀಮಾರಿ ಹಾಕುವ ಪರಿಸ್ಥಿತಿ ಇದೆ. ಅಂಬರೀಶ್ ವಿರುದ್ದ ಜಿಲ್ಲಾ ಪಂಚಾಯತ್‌ನಲ್ಲೂ ಹೋರಾಟ ಮಾಡಿದ್ದೇವೆ. ಇದನ್ನು ಜಿಲ್ಲಾ ಮಂತ್ರಿಗಳ ಗಮನಕ್ಕೂ ತಂದಿದ್ದೇವೆ. ಆದರೂ ಅವರು ನಮ್ಮ ಕಷ್ಟ ಆಲಿಸುತ್ತಿಲ್ಲ. ಸಾರ್ವಜನಿಕರ ಜೊತೆ ಸೇರಿ ಇನ್ಮುಂದೆ ಹೋರಾಟ ಮಾಡುವುದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com