ಕನ್ನಡದ ಪತ್ರಕರ್ತರಾಗಿ ಕೆಲಸ ಶುರುಮಾಡಲಿದ್ದಾರಂತೆ ಹುಚ್ಚ ವೆಂಕಟ್‌ ?

ಕೊಡಗು : ಫೈರಿಂಗ್ ಸ್ಟಾರ್‌ ಹುಚ್ಚ ವೆಂಕಟ್‌ ಪತ್ರಕರ್ತರಾಗಿ ಕೆಲಸ ಮಾಡಲಿದ್ದಾರಂತೆ. ಹೌದು ಹೀಗಂತ ಸ್ವತಃ ಹುಚ್ಚ ವೆಂಕಟ್‌ ಹೇಳಿದ್ದಾರೆ. ಕೊಡಗಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ಸಿನಿಮಾದಲ್ಲಿ ತಾವು ಪತ್ರಕರ್ತರ ಪಾತ್ರ ಮಾಡುತ್ತಿರುವುದಾಗಿ ಹೇಳಿದ್ದಾರೆ.

ಹೌದು…ಫೈರಿಂಗ್ ಸ್ಟಾರ್‌ ಹುಚ್ಚ ವೆಂಕಟ್‌ ಹೊಸ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ವೆಂಕಟ್ ಅವರ ಸಿನಿಮಾಗೆ ಡಿಕ್ಟೇಟರ್‌ ಎಂದು ಹೆಸರಿಡಲಾಗಿದ್ದು, ಈ ಬಾರಿ ಹುಚ್ಚ ವೆಂಕಟ್‌ ಪತ್ರಕರ್ತನಾಗಿ ಬಣ್ಣ ಹಚ್ಚಲಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಹುಚ್ಚ ವೆಂಕಟ್‌, ಮಾಧ್ಯಮದವರೂ ಪೊಲೀಸರಂತೆ ಕಾರ್ಯನಿರ್ವಹಿಸುತ್ತಾರೆ. ಆದರೆ ಅಂತಹ ಮಾಧ್ಯಮಗಳೇ ಸಾಕಷ್ಟು ಸಮಸ್ಯೆ ಎದುರಿಸುತ್ತಿವೆ. ಅಂತಹ ಸಮಸ್ಯೆಗಳನ್ನು ಸಮಾಜದ ಮುಂದಿಡುವ ಪ್ರಯತ್ನ ಮಾಡುತ್ತಿರುವುದಾಗಿ ಹುಚ್ಚ ವೆಂಕಟ್‌ ಹೇಳಿದ್ದಾರೆ.

ಕೊಡಗು ಜಿಲ್ಲೆಯ ಮಡಕೇರಿಯಲ್ಲಿ ಹಾಡಿನ ಚಿತ್ರೀಕರಣ ನಡೆಯಲಿದ್ದು, ಐಶ್ವರ್ಯ ಸಿನಿಮಾಗೆ ನಾಯಕಿಯಾಗಿ ನಟಿಸಲಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com