ಕೇಂದ್ರದಿಂದ ರಾಜ್ಯಕ್ಕೆ ಸಿಕ್ಕಿರುವ ಅನುದಾನದ ಲೆಕ್ಕ ಕೊಡಿ ಸಿದ್ದರಾಮಯ್ಯನವರೇ : ಅಮಿತ್ ಶಾ

ಚಿತ್ರದುರ್ಗ : ಯಡಿಯೂರಪ್ಪ ಅವರ ಆಸೆಯಂತೆ ಚಿತ್ರದುರ್ಗದಲ್ಲಿ ಪರಿವರ್ತನಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಈಗಾಗಲೆ ಯಾತ್ರೆ 8 ಸಾವಿರ ಕಿ.ಮೀ ಸಾಗಿದ್ದು, 170 ಸಮಾವೇಶಗಳನ್ನು ನಡೆಸಲಾಗಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿರುವ ಅಮಿತ್ ಶಾ, ರಾಜ್ಯ ಸರ್ಕಾರ ಭ್ರಷ್ಟ ಆಡಳಿತ ನಡೆಸುತ್ತಿದೆ. ಇದರಿಂದ ಜನ ಬೇಸತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರದಿಂದ ವಿಕಾಸದ ಮಾದರಿಯನ್ನು ಬಯಸಲು ಸಾಧ್ಯವಿಲ್ಲ. ಕರ್ನಾಟಕದ ವಿಕಾಸಕ್ಕಾಗಿ ಬಿಜೆಪಿ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ರಾಜ್ಯಕ್ಕೆ ಕೇಂದ್ರ ಸರ್ಕಾರ 2 ಲಕ್ಷದ 19 ಸಾವಿರ ರೂ ಅನುದಾನ ನೀಡಲಾಗಿದೆ. ಆ ಹಣ ಏನಾಯ್ತು. ಸಿದ್ದರಾಮಯ್ಯ ಇದರ ಬಗ್ಗೆ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕೇಂದ್ರದಿಂದ ಬಿಡುಗಡೆಯಾಗಿರುವ ಹಣ ಗ್ರಾಮಗಳಿಗೆ ತಲುಪಿಲ್ಲ. ಈ ಹಣವಷ್ಟೂ ಕಾಂಗ್ರೆಸ್‌ ನಾಯಕರ ಜೇಬು ತುಂಬಿಸಿದೆ. ನಿಮ್ಮ ಹಣದಲ್ಲಿ ಕಾಂಗ್ರೆಸ್‌ನವರು ಬಂಗಲೆ ಕಟ್ಟಿಕೊಂಡು ಮಜಾ ಮಾಡುತ್ತಿದ್ದಾರೆ. ಡಿಕೆಶಿ ಮನೆ ಮೇಲೆ ಐಟಿ ದಾಳಿ ನಡೆದಾಗ ಕೋಟ್ಯಂತರ ರೂ ಪತ್ತೆಯಾಗಿದೆ. ಆದರೂ ಅವರು ಸಂಪುಟದಲ್ಲಿದ್ದಾರೆ. ಭ್ರಷ್ಟರಿಗೆ ಸಿಎಂ ಬೆಂಬಲ ನೀಡುತ್ತಿರುವುದಾಗಿ ಆರೋಪಿಸಿದ್ದಾರೆ.

ರಾಜ್ಯ ಸರ್ಕಾರದ ಭ್ರಷ್ಟರ ಪಟ್ಟಿ ನನ್ನ ಬಳಿ ಇದೆ. ರಾಜ್ಯದಲ್ಲಿ ಬಿಜೆಪಿ, ಆರ್ ಎಸ್‌ಎಸ್‌ ನಾಯಕರ ಕಗ್ಗೊಲೆ ನಡೆಯುತ್ತಿದ್ದರೂ ಕಾಂಗ್ರೆಸ್‌ ಸರ್ಕಾರ ಏನೂ ಆಗಿಲ್ಲವೆಂಬಂತೆ ನಡೆದುಕೊಳ್ಳುತ್ತಿದೆ. ಇದು ಹಿಂದೂ ವಿರೋಧಿ ಸರ್ಕಾರ ಎಂದು ಕಿಡಿ ಕಾರಿದ್ದಾರೆ.

Leave a Reply

Your email address will not be published.