ಧನ್ಯಶ್ರೀ ಆತ್ಮಹತ್ಯೆ ಪ್ರಕರಣ : ಸುದ್ದಿಗೋಷ್ಠಿಯಲ್ಲಿ ಅಣ್ಣಾಮಲೈ ಖಡಕ್‌ ನುಡಿ

ಚಿಕ್ಕಮಗಳೂರು : ಮೂಡಿಗೆರೆ ಧನ್ಯಶ್ರೀ ಆತ್ಮಹತ್ಯೆ ಪ್ರಕರಣ ಸಂಬಂಧ ಚಿಕ್ಕಮಗಳೂರು ಎಸ್‌ಪಿ ಅಣ್ಣಾಮಲೈ ಸುದ್ದಿಗೋಷ್ಟಿ ನಡೆಸಿದ್ದಾರೆ. ಸಂತೋಷ್‌ ಸೇರಿದಂತೆ ನಾಲ್ಕೈದು ಜನ ಧಮ್ಕಿ ಹಾಕಿದ ಹಿನ್ನೆಲೆಯಲ್ಲಿ ಧನ್ಯಶ್ರೀ ಸಾಯುವ ಮುನ್ನ ಎರಡು ದಿನ ಊಟ ಮಾಡಿರಲಿಲ್ಲ.  ಧನ್ಯಶ್ರೀ ಅವರ ತಂದೆಗೆ ದಾರಿ ತಪ್ಪಿಸಿ ಸುಳ್ಳು ಪ್ರಕರಣ ನೀಡಲು ಪ್ರೋತ್ಸಾಹಿಸಿದವರ ವಿರುದ್ದ ಇಂದು ರಾತ್ರಿಯೊಳಗೆ ಎರಡನೇ ಎಫ್ಐಆರ್‌ ದಾಖಲು ಮಾಡಲಿದ್ದೇವೆ ಎಂದಿದ್ದಾರೆ.

ಇನ್ನು ಮಾಧ್ಯಮದಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡಿರುವ ಸಂಘಟನೆ ಕಾರ್ಯಕರ್ತರ ವಿರುದ್ಧ ಮೂರನೇ ಎಫ್ ಐ ಆರ್ ದಾಖಲು ಮಾಡುತ್ತೇವೆ. ಅಲ್ಲದೆ ವಾಟ್ಸಾಪ್‌ನಲ್ಲಿ ವಾರ್ನಿಂಗ್‌ ಮೆಸೇಜ್‌ ಹಾಕಿದ ನಾಲ್ವರ ವಿರುದ್ದ ಎಫ್‌ಐಆರ್‌ ದಾಖಲಿಸುತ್ತೇವೆ. ವಾಟ್ಸಾಪ್ ನಲ್ಲಿ ಧನ್ಯಶ್ರೀ ಜೊತೆ ಚಾಟ್ ಮಾಡಿರುವುದು ಸಂತೋಷ್ ಅಲ್ಲ. ಆತ ಬೇರೆ ಹೆಸರಿನಲ್ಲಿ ಚಾಟ್ ಮಾಡಿದ್ದಾನೆ. ಅವನು ಯಾರು ಅನ್ನೋದು ಕೂಡ ಈಗಾಗಲೇ ಗೊತ್ತಾಗಿದೆ. ಈ ಪ್ರಕರಣ ವನ್ನ ಗಂಭೀರವಾಗಿ ಪರಗಣಿಸಿದ್ದೇವೆ. ನಾವು ಹಿಂದೂ, ಮುಸ್ಲಿಂ ಸಂಘಟನೆ ಎಂದು ನೋಡುವುದಿಲ್ಲ. ನಮಗೆ ಎಲ್ಲರೂ ಒಂದೇ ಎಂದು ಖಡಕ್ಕಾಗಿ ಮಾತನಾಡಿದ್ದಾರೆ.

Leave a Reply

Your email address will not be published.