Chamarajanagar : ಸುಳ್ಳು BJP ಪಕ್ಷದ ಮನೆ ದೇವರು : CM ಸಿದ್ದರಾಮಯ್ಯ

ಚಾಮರಾಜನಗರ : ಮೇ ತಿಂಗಳಲ್ಲಿ ನಮ್ಮ ಸರ್ಕಾರದ ಅವಧಿ ಪೂರ್ಣಗೊಳ್ಳಲಿದೆ. ಬಸವಣ್ಣ, ಅಂಬೇಡ್ಕರ್ ಅವರ ತತ್ವದಂತೆ ನಡೆಯುತ್ತಿರುವ ಸರ್ಕಾರ ನಮ್ಮದು. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನ ಜಗತ್ತಿನಲ್ಲೇ ಉತ್ತಮ ಸಂವಿಧಾನವಾಗಿದೆ. ಅಂಬೇಡ್ಕರ್ ಅವರಲ್ಲದೇ ಬೇರೆಯವರಿಂದ ಇಂತಹ ಸಂವಿಧಾ ನ ರಚನೆಯಾಗುತ್ತಿರಲಿಲ್ಲ ಎಂದು ಚಾಮರಾಜನಗರದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸಂವಿಧಾನದ ಬಗ್ಗೆ ಕೆಲವರಿಗೆ ನಂಬಿಕೆ ಇಲ್ಲ‌. ನಂಬಿಕೆ, ಗೌರವ ಇಲ್ಲದವರು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಕೇಂದ್ರದ ಒಬ್ಬ ಮಂತ್ರಿ ಸಂವಿಧಾನದ ಬಗ್ಗೆ ಮಾತನಾಡುವುದು ಸರಿಯಲ್ಲ. ಪ್ರಧಾನಿ ಮೋದಿ ಅವರಿಗೆ ಗೊತ್ತಿದ್ದೇ ಸಂವಿಧಾನದ ಬಗ್ಗೆ ಕೆಟ್ಟದಾಗಿ ಹೇಳಿಕೆ ಕೊಟ್ಟಿದ್ದಾರೆ ಎಂದ ಅನಂತ್‌ ಕುಮಾರ್‌ ಹೆಗಡೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಅಭಿವೃದ್ಧಿಗೆ ಕಾರ್ಯಗಳಿಗೆ ಕಾಂಗ್ರೆಸ್ ನೀಡಿದಷ್ಟು ಅನುದಾನವನ್ನು ಯಾರು ನೀಡಿಲ್ಲ. ಮುಂದಿನ ಭಾರಿಯೂ ಕಾಂಗ್ರೆ ಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ಯಡಿಯೂರಪ್ಪ ಅವರ ಮಿಷನ್ 150 ಈಗ 50ಕ್ಕೆ ಇಳಿದಿದೆ. ಬಿಜೆಪಿಯವರು ಸಾಲು ಸಾಲಾಗಿ ಜೈಲಿಗೆ ಹೋದವರು. ಬಿಜೆಪಿ ಅವ್ರು ನನ್ನನ್ನು ಜೈಲಿಗೆ ಕಳಿಸ್ತಾರಂತೆ ಎಂದು ವ್ಯಂಗ್ಯ ಮಾಡಿದ್ದಾರೆ.

ಇದೇ ವೇಳೆ ಸುಳ್ಳು ಬಿಜೆಪಿಯವರ ಮನೆ ದೇವರು ಎಂದಿರುವ ಸಿಎಂ, ರಾಜ್ಯ ಬಿಜೆಪಿಯವರು ಪ್ರಧಾನಿ ಎದುರು ಸೌಂಡ್ ಮಾಡಲು ಶಕ್ತಿ ಇಲ್ಲದ ಗಿರಾಕಿಗಳು. ಬಿಜೆಪಿಯವರು ಬಣ್ಣ ಬದಲಿಸುವ ಗೋಸುಂಬೆಗಳಂತೆ. ನರೇಂದ್ರ ಮೋದಿ ಅವರದು ಖಾಲಿ ಬಾತ್, ನಮ್ಮದು ಕಾಮ್ ಕಿ ಬಾತ್ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com