ಪತ್ನಿ ಅಡುಗೆ ಮಾಡಿಲ್ಲ ಎಂದು ಸಿಟ್ಟಿಗೆದ್ದ ಈ ಪತಿ ಮಹಾಶಯ ಮಾಡಿದ್ದೇನು ?

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಪತಿ-ಪತ್ನಿಯರ ಮಧ್ಯೆ ಇರಬೇಕಾದ ಸಾಮರಸ್ಯ ಮರೆಯಾಗುತ್ತಿದೆ. ಚಿಕ್ಕ ಪುಟ್ಟ ವಿಚಾರಗಳನ್ನೂ ದೊಡ್ಡದು ಮಾಡಿ ಗಲಾಟೆ ಮಾಡಿಕೊಳ್ಳುವ ಪರಿಪಾಠ ಶುರುವಾಗಿದೆ.

ಬೆಂಗಳೂರಿನಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದ್ದು, ಪತ್ನಿ ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಪತ್ನಿಯನ್ನು ಥಳಿಸಿದ್ದಲ್ಲದೆ ಆಕೆಯನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದಾನೆ.

ಮೃತ ವ್ಯಕ್ತಿಯನ್ನು ಲಕ್ಷ್ಮಿ ನರಸಮ್ಮ (40) ಎಂದು ಗುರುತಿಸಲಾಗಿದೆ. ಕುಡಿದ ಅಮಲಿನಲ್ಲಿ ಬಂದ ಪತಿ ವೆಂಕಟೇಶ್‌ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಕುಡಿದು ಮನೆಗೆ ಬಂದ ವೆಂಕಟೇಶ್‌, ಪತ್ನಿ ಮನೆಯಲ್ಲಿ ಅಡುಗೆ ಮಾಡಿಲ್ಲವೆಂದು ಸಿಟ್ಟಿಗೆದ್ದು, ಕೋಲು ಹಾಗೂ ಕಲ್ಲಿನಿಂದ ಲಕ್ಷ್ಮಿ ನರಸಮ್ಮನನ್ನು ಹೊಡೆದಿದ್ದಾನೆ. ಬಳಿಕ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.

ಪ್ರಕರಣ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತಿ ವೆಂಕಟೇಶ್‌ ಪೊಲೀಸರ ಅತಿಥಿಯಾಗಿದ್ದಾನೆ.

Leave a Reply

Your email address will not be published.

Social Media Auto Publish Powered By : XYZScripts.com