ಗೊಮ್ಮಟೇಶ್ವರನಿಗೆ ಚಡ್ಡಿ ಹಾಕ್ಸಿ ಪ್ಲೀಸ್‌ : CM ಗೆ ಬಂತು ಹೀಗೊಂದು ಮನವಿ ಪತ್ರ !!

ಬೆಂಗಳೂರು : ಶ್ರವಣಬೆಳಗೊಳ ಸೇರಿದಂತೆ ರಾಜ್ಯದಲ್ಲಿರುವ ಎಲ್ಲಾ ಗೊಮ್ಮಟೇಶ್ವರ ಮೂರ್ತಿಗೆ ಚಡ್ಡಿ ಹಾಕಿಸಿ ಎಂದು ಪತ್ರಕರ್ತರೊಬ್ಬರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಇಂತಹದ್ದೊಂದು ಪತ್ರ ಸಿದ್ದರಾಮಯ್ಯ ಅವರ ಕಚೇರಿಗೆ ತಲುಪಿದ್ದು. ಪತ್ರಕರ್ತ ಆದಿ ಪ್ರಭು ಎಂಬುವವರು ಈ ಮನವಿ ಮಾಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ. ಗೊಮ್ಮಟೇಶ್ವರನ ಮೂರ್ತಿ ನಗ್ನವಾಗಿದ್ದು, ಇದು ಮುಜುಗರಕ್ಕೀಡು ಮಾಡುತ್ತದೆ. ಮಹಿಳೆಯರು ಹಾಗೂ ಮಕ್ಕಳು ಬಾಹುಬಲಿಯ ವಿವರ ಕೇಳಿದಾಗ ಮುಜುಗರ ಎನಿಸುತ್ತದೆ. ಆದ್ದರಿಂದ ಗೊಮ್ಮಟೇಶ್ವರನ ಮೂರ್ತಿಗೆ ಬಟ್ಟೆ ತೊಡಿಸಿ. ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಎಂದು ಸಿಎಂಗೆ ಮನವಿ ಮಾಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com