ಗೋಡೆಗಳ ಬಣ್ಣ ಬದಲಿಸುವುದು ವಿಕಾಸವೇ : ಯೋಗಿಗೆ ಪ್ರಕಾಶ್‌ ರೈ ಪ್ರಶ್ನೆ

ಲಖನೌ : ಯೋಗಿ ಆದಿತ್ಯನಾಥ್‌ ಆಡಳಿತವಿರುವ ಉತ್ತರ ಪ್ರದೇಶದಲ್ಲಿ ಹಜ್‌ ಭವನಕ್ಕೆ ಬಳಿಯಲಾಗಿದ್ದ ಕೇಸರಿ ಬಣ್ಣದ ವಿಚಾರ ಸಂಬಂಧ ನಟ ಪ್ರಕಾಶ್‌ ರೈ ಟೀಕಿಸಿದ್ದಾರೆ.

ಈ ಕುರಿತು ಪ್ರಕಾಶ್‌ ರೈ ಟ್ವೀಟ್‌ ಮಾಡಿದ್ದು, ಗೋಡೆಗಳ ಬಣ್ಣ ಬದಲಾವಣೆ ಮಾಡುವುದು ವಿಕಾಸವೇ ಎಂದು ಪ್ರಶ್ನಿಸಿದ್ದಲ್ಲದೆ, ರೈತರು ಬೆಲೆ ಕುಸಿತದಿಂದ ಆಲೂಗೆಡ್ಡೆಯನ್ನು ನಿಮ್ಮ ಮನೆ ಎದುರು ಸುರಿಯುತ್ತಿದ್ದಾರೆ.. ಆದರೂ ನಿಮ್ಮ ಕೃಷಿ ಸಚಿವ, ರೈತರು ಬೆಳೆದ ಆಲೂಗೆಡ್ಡೆ ಉತ್ತಮ ಗುಣಮಟ್ಟದ್ದಲ್ಲ ಎನ್ನುತ್ತಾರೆ. ರೈತರ ಕಷ್ಟ ಅರ್ಥೈಸಿಕೊಳ್ಳುವುದು ಹೀಗೇನಾ ಎಂದು ಟೀಕಾ ಪ್ರಹಾರ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com