ರಾಜಸ್ಥಾನದಲ್ಲಿ ಪದ್ಮಾವತ್‌ಗಿಲ್ಲ ಬಿಡುಗಡೆ ಭಾಗ್ಯ : ಇದು ರಾಜೇ ಸುಗ್ರೀವಾಜ್ಞೆ

ಮುಂಬೈ : ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಪದ್ಮಾವತ್ ಸಿನಿಮಾ ಬಿಡುಗಡೆಗೆ ಸೆನ್ಸಾರ್‌ ಮಂಡಳಿ ಒಪ್ಪಿಗೆ ನೀಡಿದ್ದರೂ ರಾಜಸ್ಥಾನದಲ್ಲಿ ಸಿನಿಮಾ ಬಿಡುಗಡೆಗೆ ತಡೆ ಹಿಡಿಯಲಾಗಿದೆ. ಸಿನಿಮಾ ಬಿಡುಗಡೆಗೆ ರಾಜಸ್ಥಾನ ಸಿಎಂ ವಸುಂಧರಾ ರಾಜೇ ನಿಷೇಧ ಹೇರಿದ್ದಾರೆ.

ರಾಣಿ ಪದ್ಮಿನಿ ರಾಜಸ್ಥಾನದ ಗೌರವ ಹಾಗೂ ಪ್ರಾಮಾಣಿಕತೆಯ ಸಂಕೇತವಾಗಿದ್ದು, ನಮಗೆ ಇತಿಹಾಸದಲ್ಲಿ ಪದ್ಮಾವತಿ ಕೇವಲ ಒಬ್ಬ ರಾಣಿಯಾಗಿ ಕಾಣಿಸಿಕೊಳ್ಳದೆ ರಾಜ್ಯದ ಹೆಮ್ಮೆಯ ಸಂಕೇತವಾಗಿದ್ದಾರೆ. ಈ ಕಾರಣದಿಂದ ಯಾವುದೇ ರೀತಿಯಲ್ಲಿ ಪದ್ಮಿನಿ ಘನತೆಗೆ ಧಕ್ಕೆ ತರಲು ನಾವು ಬಿಡುವುದಿಲ್ಲ ಎಂದು ಸಿಎಂ ವಸುಂಧರಾ ರಾಜೇ ಕಚೇರಿ ಮೂಲಗಳು ಹೇಳಿವೆ.

ರಾಜಸ್ಥಾನದಲ್ಲಿ ಮೊದಲಿನಿಂದಲೂ ಪದ್ಮಾವತ್ ಸಿನಿಮಾಗೆ ವಸುಂಧರಾ ರಾಜೇ ನಿಷೇಧ ಹೇರಿದ್ದಾರೆ. ಅವರ ಆದೇಶ ಪಾಲಿಸುವುದು ನಮ್ಮ ಕೆಲಸ. ನಾವು ಅದೇ ರೀತಿ ಮಾಡುತ್ತಿದ್ದೇವೆ ಎಂದು ರಾಜಸ್ಥಾನದ ಗೃಹ ಸಚಿವರು ಹೇಳಿಕೆ ನೀಡಿದ್ದಾರೆ.

ಇದೇ ತಿಂಗಳ 25ರಂದು ಸಿನಿಮಾ ತೆರೆ ಕಾಣಲಿದ್ದು, ರಾಜಸ್ಥಾನದಲ್ಲಿ ಮಾತ್ರ ಸಿನಿಮಾಗೆ ನಿಷೇಧ ಹೇರಲಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com