ಮಂಗಳೂರಿನಲ್ಲಿ ಮತ್ತೊಂದು ಅನೈತಿಕ ಪೊಲೀಸ್‌ಗಿರಿ : ಈ ಬಾರಿ ಟಾರ್ಗೆಟ್‌ ಯಾರು ?

ಮಂಗಳೂರು : ಭಿನ್ನ ಕೋಮಿನ ಎಡಪಂಥೀಯ ವಿದ್ಯಾರ್ಥಿ ಸಂಘಟನೆಯ ಮುಖಂಡರ ಪೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ನೈತಿಕ ಪೊಲೀಸ್ ಗಿರಿ ನಡೆಸಿದ ಪ್ರಕರಣ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರಿನ ಎಸ್ ಎಫ್ ಐ ವಿದ್ಯಾರ್ಥಿ ಸಂಘಟನೆಯ ಪದಾದಿಕಾರಿಗಳಾದ ಮಧುರಿ ಬೋಲಾರ ಹಾಗೂ ಹಂಝ ಕಿನ್ಯಾ ಸೇರಿದಂತೆ ಸಂಘಟನೆಯ ಮುಖಂಡರು ದಾವಣಗೆರೆಯ ಸಮ್ಮೇಳನಕ್ಕೆ ತೆರಳಿದ್ದರು. ರೈಲಿನಲ್ಲಿ ಹೋಗ್ತಿದ್ದ ವೇಳೆ ವಿದ್ಯಾರ್ಥಿಗಳು ಜೊತೆಗಿದ್ದ ಫೋಟೋವನ್ನು ಇವರು ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದರು.

ಇದನ್ನೇ ಬಳಸಿಕೊಂಡ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಯುವತಿ ಜೊತೆ ಮುಸ್ಲಿಂ ಯುವಕ ಸುತ್ತಾಡುತ್ತಿದ್ದಾನೆ. ಇನ್ನು ಜೊತೆ ಕಾಣಿಸಿಕೊಂಡರೆ ತಕ್ಕ ಉತ್ತರ ನೀಡಿ ಎಂದು ಬರೆದಿದ್ದಾರೆ. ಸದ್ಯ ಈ ಪೋಟೋ ವೈರಲ್ ಆಗ್ತಿದೆ. ಈ ಕುರಿತಾಗಿ ವಿದ್ಯಾರ್ಥಿ ಮುಖಂಡರಾದ ಮಾಧುರಿ ಬೋಳಾರ್ ಹಾಗೂ ಹಂಜ ಕಿನ್ಯಾ ಮಂಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com