ಆಳ್ವಾಸ್‌ ಕಾಲೇಜಿನಲ್ಲಿ ಆತ್ಮಹತ್ಯೆಗೆ ಶರಣಾದ ಮತ್ತೊಬ್ಬ ವಿದ್ಯಾರ್ಥಿ

ಮಂಗಳೂರು : ಮೂಡಬಿದ್ರೆಯ ಆಳ್ವಾಸ್‌ ಕಾಲೇಜಿನಲ್ಲಿ ಮತ್ತೊಬ್ಬ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮೃತ ಯುವಕನನ್ನು ಬೆಂಗಳೂರು ಮೂಲದ ತೇಜಸ್‌ (16) ಎಂದು ಗುರುತಿಸಲಾಗಿದೆ. ತೇಜಸ್‌ ತನ್ನ ಹುಟ್ಟುಹಬ್ಬದಂದೇ ಕಾಲೇಜಿನ ಹಾಸ್ಟೆಲ್‌ನಲ್ಲಿ ಡೆತ್‌ನೋಟ್‌ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಸೋಮವಾರ ತೇಜಸ್‌ ಹುಟ್ಟುಹಬ್ಬವಾದ ಕಾರಣ ಆತನ ತಂದೆ ಹಾಗೂ ಅವರ ಎರಡನೇ ಹೆಂಡತಿ, ತೇಜಸ್‌ನನ್ನು ಭೇಟಿಯಾಗಿ ಹೋಗಿದ್ದರು ತೇಜಸ್ ತಾಯಿ ಈ ಹಿಂದೆಯೇ ಮೃತಪಟ್ಟಿದ್ದರು.  ಈ ವೇಳೆ ತಂದೆ ತಮಗೆ ಉಂಟಾಗಿರುವ ಬೆನ್ನುನೋವಿನ ಬಗ್ಗೆ ತೇಜಸ್‌ಗೆ ಹೇಳಿದ್ದರು. ಈ ಬಗ್ಗೆ ಸ್ನೇಹಿತರಲ್ಲಿಯೂ ತೇಜಸ್‌ ಹೇಳಿಕೊಂಡಿದ್ದ. ಸೋಮವಾರ ರಾತ್ರಿ 7.30ರ ಸುಮಾರಿಗೆ ತೇಜಸ್‌ ಹಾಸ್ಟೆಲ್‌ನಲ್ಲಿ ತನ್ನ ತಾಯಿಯ ಸಾವಿನ ಬಗ್ಗೆ ಹಾಗೂ ತಂದೆಯ ಬೆನ್ನುನೋವಿನ ಬಗ್ಗೆ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೂಡಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ವರ್ಷ ಇದೇ ಕಾಲೇಜಿನಲ್ಲಿ ಆಟಗಾರ್ತಿ ಕಾವ್ಯಾ ಪೂಜಾರಿ ನಿಗೂಢವಾಗಿ ಸಾವಿಗೀಡಾಗಿದ್ದರು. ಈ ಪ್ರಕರಣ ರಾಜ್ಯದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈಗ ಮತ್ತೆ ಅದೇ ಕಾಲೇಜಿನ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.

 

Leave a Reply

Your email address will not be published.

Social Media Auto Publish Powered By : XYZScripts.com