2 ತಿಂಗಳ ಭ್ರೂಣವನ್ನು ತೆಗೆಸಿ ಡಬ್ಬದಲ್ಲಿ ಹಾಕಿ ಪೊಲೀಸ್‌ ಠಾಣೆಗೆ ತಂದ್ಲು ಮಹಿಳೆ !!!

ಇಂದೋರ್‌ : ಪತಿ ಸದಾ ಅನುಮಾನ ಪಡುತ್ತಿದ್ದ ಎಂಬ ಕಾರಣದಿಂದ ಬೇಸತ್ತ ಮಹಿಳೆಯೊಬ್ಬರು ಗರ್ಭಪಾತ ಮಾಡಿಸಿಕೊಂಡು ಭ್ರೂಣವನ್ನು ಪೊಲೀಸ್‌ ಠಾಣೆಗೆ ತಂದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಶಿವನ್‌ ಪ್ರದೇಶದಲ್ಲಿ ನಡೆದಿದೆ.

ಶನಿವಾರ ಈ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಎಂಟು ತಿಂಗಳ ಹಿಂದೆ ರೀತು ಎಂಬುವವರಿಗೆ ಪಂಕಜ್‌ ಎಂಬಾತನ ಜೊತೆ ಮದುವೆಯಾಗಿತ್ತು. ಕೆಲ ತಿಂಗಳು ಜೊತೆಗಿದ್ದ ಪಂಕಜ್ ಬಳಿಕ ಪತ್ನಿಯನ್ನು ತವರು ಮನೆಗೆ ಬಿಟ್ಟುಬಂದಿದ್ದ. ಬಳಿಕ ಮಹಿಳೆ ಗರ್ಭವತಿಯಾಗಿದ್ದರು, ಆದರೆ ಪತಿ ಸದಾ ಮಹಿಳೆಯ ಮೇಲೆ ಅನುಮಾನ ಪಡುತ್ತಿದ್ದ. ಇದರಿಂದ ಬೇಸತ್ತ ಪತ್ನಿ 2 ತಿಂಗಳ ಭ್ರೂಣವನ್ನು ತೆಗೆಸಿ ಡಬ್ಬದಲ್ಲಿ ಹಾಕಿಕೊಂಡು ಬಂದಿದ್ದರು. ಆದರೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿರುವುದಾಗಿ ತಿಳಿದುಬಂದಿದೆ.

ಈ ವಿಚಾರವಾಗಿ ರೀತು ಹೇಳಿಕೆ ನೀಡಿದ್ದು, ನನ್ನ ಗಂಡ ನನ್ನ ಮೇಲೆ ಅನುಮಾನ ಪಡುತ್ತಾನೆ. ನನ್ನ ಮೇಲಿರುವ ಕಳಂಕ ಹೋಗಬೇಕು. ಸತ್ಯ ಜಗತ್ತಿಗೆ ತಿಳಿಯಬೇಕು. ಆದ್ದರಿಂದ ಡಿಎನ್‌ಎ ಪರೀಕ್ಷೆ ಮಾಡಿ ಎಂದು ಮನವಿ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com