ಕನ್ನಡಂಗಳ್-1 : ಕನ್ನಡಂಗಳ್=‘ಕನ್ನಡ+-ಗಳು’=‘ಕನ್ನಡಜಗತ್ತು+-ಗಳು’ – ಕನ್ನಡ-ವ್ಯಾಕರಣ-ಸಮಾಜ

ಕನ್ನಡಂಗಳ್=‘ಕನ್ನಡ+-ಗಳು’=‘ಕನ್ನಡಜಗತ್ತು+-ಗಳು’ – ಕನ್ನಡ-ವ್ಯಾಕರಣ-ಸಮಾಜ

ಕನ್ನಡಂಗಳ್ ಎಂಬುದನ್ನು‘ಕನ್ನಡ+-ಗಳು’ಎಂದುಒಡೆದು ನೋಡುವ ವ್ಯಾಕರಣದೊಂದಿಗೆ‘ಕನ್ನಡಜಗತ್ತು+-ಗಳು’ಎಂದು ಬಾವಿಸಿಕೊಳ್ಳುವ ಸೋಸಿಯಾಲಜಿಯೊಂದಿಗೆ ಹೀಗೆ ಬನ್ನಿ,

ಕನ್ನಡಎಂಬುದು ಬಾಶೆಯನ್ನು ಹೇಳುವುದಕ್ಕೆ ಇರುವ ಪದ ಎಂದೆನಿಸಿದರೂ ಪ್ರಾಚೀನ ಕಾಲದಿಂದಲೂ ನಾಡು, ನುಡಿ, ಜನ, ಸಮಾಜ, ಸಂಸ್ಕ್ರುತಿ ಮೊದಲಾದವುಗಳಿಗೆ ಸಹಜವಾಗಿ ಇದು ಬಳಕೆ ಆಗಿದೆ.ಆದುನಿಕ ಕಾಲದಲ್ಲಿಯಂತೂ ಈ ಪದದ ಅರ್ತ ಬಹುವ್ಯಾಪಕವಾಗಿ ವಿಸ್ತರಿಸಿದೆ. ಮನಸ್ಸು, ವ್ಯಕ್ತಿತ್ವ, ಕುಲ ಮೊದಲಾದವುಗಳಾಗಿಯೂ ಬಳಕೆಯಾಗುತ್ತಿದೆ. ಕನ್ನಡ ಮನಸ್ಸು, ಕನ್ನಡತನ, ಕನ್ನಡ ಕುಲ ಪ್ರಯೋಗಗಳನ್ನು ಗಮನಿಸಬಹುದು.

ಮಗು ಈ ಜಗತ್ತನ್ನು ಅರ್ತ ಮಾಡಿಕೊಳ್ಳುವುದು ತನ್ನ ಮನೆಮಾತಿನ ಮೂಲಕ. ಮಗುವಿನ ಮಾನಸಿಕ ಬೆಳವಣಿಗೆ ಆ ಮಗುವಿಗೆ ದೊರೆಯುವ ಬಾಶೆಯ ಮೂಲಕ ಆಗಿರುತ್ತದೆ. ಆದ್ದರಿಂದ ಬಹುವಾಗಿ ಆ ಬಾಶೆಯರಚನೆ ಮಗುವಿನ ಮಾನಸಿಕ ರಚನೆಯನ್ನೂ ನಿಯಂತ್ರಿಸುತ್ತದೆ. ಮುಂದುವರೆದು ಮಗು ಸಾಮಾಜಿಕತೆಯನ್ನು ಕಲಿಯುವ ವೇಳೆಗೆ ಬಾಶೆಯರಚನೆ ಮತ್ತು ಸಾಮಾಜಿಕರಚನೆ ಪರಸ್ಪರ ಪೂರಕವಾಗಿ ಇರುತ್ತವೆ. ಸಂಸ್ಕ್ರುತಿ ಎನ್ನುವುದು ಪ್ರತಿಯೊಂದು ಸಾಮಾಜಿಕ ಗುಂಪುಗಳಿಗೆ ನಿರ್ದಿಶ್ಟವಾಗಿರುತ್ತದೆ.ಅದು ಮಗುವಿನ ಬಾಶೆಯ ರಚನೆಯೊಂದಿಗೆ ಬೆರೆತುಕೊಂಡಿರುತ್ತದೆ. ಹೀಗೆ ಬಾಶೆಯೊಂದು ಮಗುವಿನ ಮಾನಸಿಕತೆ, ಸಾಮಾಜಿಕತೆ ಮತ್ತು ಸಂಸ್ಕ್ರುತಿಗಳನ್ನು ನಿಯಂತ್ರಿಸುತ್ತದೆ ಇಲ್ಲವೆಅರಳಿಸುತ್ತದೆ. ಬಾಶೆಯ ಬಗೆಗೆ ತಿಳಿದುಕೊಳ್ಳುವುದು ಎಂದರೆ ವ್ಯಕ್ತಿಯ ಮಾನಸಿಕ, ಸಾಮಾಜಿಕ ಮತ್ತು ಸಾಂಸ್ಕ್ರುತಿಕ ಮಗ್ಗುಲುಗಳನ್ನು ಪರಿಚಯಿಸಿಕೊಂಡಂತೆ.

ಇದರ ಮುಂದುವರಿಕೆಯಂತೆ ಹೇಳಬಹುದಾದರೆ, ವ್ಯಕ್ತಿಯೊಬ್ಬರ ಅಬಿವ್ಯಕ್ತಿ, ಸಾಮಾಜಿಕ ಸಂಬಂದಗಳು, ಸಾಹಿತ್ಯ, ದರ್ಮ, ಆರ್ತಿಕತೆ, ರಾಜಕೀಯ ಇವೆಲ್ಲವೂ ಬಾಶೆಯೊಂದಿಗೆ ನೇರವಾಗಿ ಹೊಂದಿಕೊಂಡಿರುತ್ತವೆ. ಇತಿಹಾಸದ ಉದ್ದಕ್ಕೂ ಬಾಶಾ ಕೇಂದ್ರಿತವಾಗಿ ಇಲ್ಲವೆ ಬಾಶೆಯನ್ನು ಊರುಗೋಲಿನಂತೆ ಬಳಸಿಕೊಂಡು ಆದ ಚಳುವಳಿಗಳು, ಸಾಹಿತ್ಯಿಕ ಬೆಳವಣಿಗೆಗಳು, ದಾರ್ಮಿಕ ಹೋರಾಟಗಳು, ಸಾಮ್ರಾಜ್ಯಗಳು, ಸಾಂಸ್ಕ್ರುತಿಕ ನಾಯಕರುಗಳು ಹೀಗೆ ಹಲವು ಬೆಳವಣಿಗೆಗಳನ್ನು ಕಾಣಬಹುದು. ಹಾಗಾದರೆ ಬಾಶೆಯ ಬಗೆಗೆ ತಿಳಿದುಕೊಳ್ಳುವುದು ಎಂದರೆ ವಿಸ್ತಾರವಾದ ಅರ್ತದಲ್ಲಿ ಈ ಎಲ್ಲವನ್ನೂ ತಿಳಿದುಕೊಳ್ಳುವುದಕ್ಕೆ ಅಣಿಯಾದಂತೆ ಇಲ್ಲವೆ ಪೂರಕ ಅರಿವನ್ನು ಪಡೆದಂತೆ. ಸಮಾಜದ ಪ್ರತಿಯೊಂದು ವಲಯದ ಬೆಳವಣಿಗೆಯ ಚಿಂತನೆ ಮತ್ತು ಅವುಗಳ ಅಬಿವ್ಯಕ್ತಿ ಬಾಶೆಯ ಮೂಲಕವೆ ಎಂಬುದನ್ನು ಅರಿಯಬೇಕು.

ಹೀಗೆ ಚಿಂತನೆ ಮತ್ತು ಅಬಿವ್ಯಕ್ತಿಗಳನ್ನು ಬೆಸೆಯುವ ಬಾಶೆಗೆ ಒಂದು ವ್ಯಾಕರಣ ಇದೆ. ಇದನ್ನೆ ರಚನೆ ಎಂದು ಕರೆಯಬಹುದು. ಈ ರಚನೆ ವ್ಯಕ್ತಿಯ ಮಾನಸಿಕ, ಸಮಾಜದ ಸಾಂಸ್ಕ್ರುತಿಕ ರಚನೆಯನ್ನು ನಿಯಂತ್ರಿಸುತ್ತದೆ .ಹೀಗಾಗಿ ವ್ಯಾಕರಣವನ್ನು ತಿಳಿದುಕೊಳ್ಳುವುದು ಮುಕ್ಯ. ಬಾಶೆಯ ರಚನೆಯನ್ನು ತಿಳಿದುಕೊಳ್ಳುವುದು ಕೇವಲ ವ್ಯಾಕರಣ ಕಲಿಕೆ ಎಂದಲ್ಲ, ಸಾಮಾಜಿ ಕಕಲಿಕೆಯ ಬಾಗವೂ ಅಹುದು.

ಬಾಶೆಯೊಂದು ಹುಟ್ಟುತ್ತದೆ, ಬೆಳೆಯುತ್ತದೆ, ಸಾಯುತ್ತದೆ. ಬದುಕಿರುವ ಬಾಶೆ ನಿರಂತರ ಬೆಳೆಯುತ್ತಾ, ಅದು ಬಳಕೆಯಲ್ಲಿರುವ ಸಮಾಜದ ಎಲ್ಲ ಆಯಾಮಗಳನ್ನೂ ತನ್ನೊಳಗೆ ದಾಕಲಿಸಿಕೊಳ್ಳುತ್ತಾ ಹೋಗುತ್ತದೆ. ಹಾಗಾಗಿ ಬಾಶೆಯ ಅದ್ಯಯನ ಒಂದು ಚರಿತ್ರೆಯೆ, ಸಮಾಜದ ಎಲ್ಲ ವಲಯಗಳ ಚರಿತ್ರೆಯನ್ನು ತಿಳಿದುಕೊಳ್ಳುವುದಕ್ಕೂ ಪೂರಕ.

ಬಾಶೆಯೊಂದು ಹೀಗೆ ಬದುಕಿರುವಾಗ ಇತರ ಬಾಶೆಗಳೊಂದಿಗೆ ಕಾಲಾಂತರ, ದೇಶಾಂತರಗಳಲ್ಲಿ ಬಿನ್ನ ಸಂಬಂದವನ್ನುಇಟ್ಟುಕೊಂಡಿರುತ್ತದೆ.ಆ ಬಾಶಿಕರ ಬೆಳವಣಿಗೆ ಇದನ್ನು ನಿಯಂತ್ರಿಸುತ್ತಿರುತ್ತದೆ. ಬಾಶೆಗಳ ನಡುವೆಕೊಡುವುದು-ಪಡೆವುದು ನಿರಂತರ ನಡೆದೆ ಇರುತ್ತದೆ. ಕೊಡುವುದು-ಪಡೆವುದು ಏನು, ಎಶ್ಟು ಮೊದಲಾದ ಪ್ರಶ್ನೆಗಳು ಬೇರೆ. ಪ್ರತಿಯೊಂದು ಬಾಶೆಗೂ ಅದರದೆ ಆದ ಅಯ್ಡೆಂಟಿಟಿ ಎಂಬುದು ಇರುತ್ತದೆ. ವ್ಯಕ್ತಿಗೆ ಮತ್ತು ಸಮಾಜಕ್ಕೆ ಬಾಶೆ ಈ ಗುರ್ತಿಕೆಯನ್ನು ಒದಗಿಸುತ್ತದೆ.

ಆದುನಿಕ ಕಾಲದಲ್ಲಿ ಬಾಶೆ ಸಂಕೀರ್ಣ ಆಯಾಮಗಳನ್ನು ಪಡೆಯುತ್ತಾ ಬೆಳೆದಿದೆ .ಮುಕ್ಯವಾಗಿ ಮಾತ್ರು ಬಾಶಾ ಶಿಕ್ಶಣ, ಆಡಳಿತ, ನ್ಯಾಯಾಂಗದಲ್ಲಿ ಬಾಶೆ ಮೊದಲಾದವು. ತಾಂತ್ರಿಕತೆಯೊಂದಿಗೆ ಒಂದು ಬಾಶೆ ಹೊಂದಿಕೊಂಡು ಬೆಳೆಯಬೇಕಾದ ಅನಿವಾರ್ಯತೆ ಇಂದು ಒದಗಿದೆ. ಅದರ ಜೊತೆಗೆ ಬಾಶೆ ಹೆಸರಿನ ದೊಡ್ಡ ದೊಡ್ಡತಾತ್ವಿಕ ಜಗಳಗಳು ಮಾತ್ರವಲ್ಲದೆ ಬೀದಿಕಲಹಗಳು, ಹೊಡೆದಾಟಗಳೂ ಇಂದೂ ಹೆಚ್ಚಾಗುತ್ತಿವೆ.

ಹೀಗೆ ಈ ಮೇಲೆ ಮಾತನಾಡಿದವನ್ನು ಒಳಗೊಂಡು ಬಾಶೆಯ ಸಮಗ್ರ ಆಯಾಮಗಳನ್ನುಕನ್ನಡ ಕೇಂದ್ರಿತವಾಗಿ ನೊಡಬೇಕಿದೆ. ಇದರಿಂದ ಹಲವು ವಲಯಗಳ, ಆಯಾಮಗಳ ಅರಿವು ಹೆಚ್ಚಾಗಬಹುದು.ಇಂತದೊಂದು ಕನ್ನ ಡಕೇಂದ್ರಿತ ನೋಟವೆ‘ಕನ್ನಡಂಗಳ್’ ಎಂಬ ಈ ಅಂಕಣ ಕನ್ನಡ ಸಮಾಜದ ಒಳಬರುವಿನ ದಾರಿ.

ಈ ಅಕಂಣವನ್ನುಕೆಲವು ಲಿಪಿಗಳನ್ನು ಪ್ರಾಯೋಗಿಕವಾಗಿ ಬಿಟ್ಟು ಕನ್ನಡದ ಸಹಜ ಲಿಪಿಯಲ್ಲಿ ಬರೆದಿದೆ.ಕನ್ನಡದಾಗ ಮಹಾಪ್ರಾಣ ಅಕ್ಕರಗಳು ಇಲ್ಲ ಎಂಬುದು ಕನ್ನಡದ ಶ್ರೇಶ್ಟವಯ್ಯಾಕರಣಿಗಳಾದ ನಾಗವರ್ಮ, ಕೇಶಿರಾಜ, ಬಿಳಿಗಿರಿ ಮತ್ತು ಶಂಕರಬಟ್ಟರ ವಿಚಾರ,ಋ, ಷ್ ಇವುಗಳನ್ನುಕನ್ನಡಕ್ಕೆ ಬೇಡವೆಂದು ಕೇಶಿರಾಜನೆ ಕಳೆದಿದ್ದ, ಸಂದ್ಯಕ್ಕರಗಳು ಎರಡು ಅಕ್ಕರಗಳು ಕೂಡಿ ಆಗಿವೆ ಎಂಬ ವಾಸ್ತವಕ್ಕೆ ಅದನ್ನೊಂದು ಲಿಪಿಯಾಗಿ ಬಳಸುವುದು ಸಹಜವಾಗಲಿಕ್ಕಿಲ್ಲ. ಅದರಂತೆ ‘ರ್’ ಅಬಿವ್ಯಕ್ತಿಯ ರ್‘’ ಕೂಡ.

ಕನ್ನಡ ಲಿಪಿಬದಲಾವಣೆಗೆ ಮೊದಲಿನಿಂದಲೂತೆರೆದುಕೊಂಡಿದೆ, ಗಮನಿಸಿಸಂಸ್ಕ್ರುತವ್ಯಾಕರಣ ನಿಯಮಗಳ ಆದಾರದಲ್ಲಿ ಕನ್ನಡಕ್ಕೆ ಲಿಪಿಯನ್ನು ಹೊಂದಿಸಿಕೊಳ್ಳುವಾಗ ದೇಸಿ ದ್ವನಿಗಳಿಗೆ ಲಿಪಿ ಮಾಡಿಕೊಂಡುದು ,ಆನಂತರ ಬಿಂದುವನ್ನು ಸೇರಿಸಿಕೊಂಡುದು, ¾õï ಮತ್ತು¿õï ಗಳನ್ನು ಕಳೆದದ್ದು,ಆದುನಿಕಕಾಲದಾಗ ಋು ಅನ್ನು ಬಿಟ್ಟದ್ದುಕಾಣಬಹುದು.

ಕನ್ನಡದ ಸಾವಿರಾರು ಶಾಸನ ಮತ್ತು ಹಸ್ತಪ್ರತಿಗಳಲ್ಲಿ, ನಮ್ಮ ಶಾಲಾ ಮಕ್ಕಳ ಬರವಣಿಗೆಯಲ್ಲಿ ಇಂದಿನ ಶಿಶ್ಟಕನ್ನಡಕ್ಕೆ ಅಸಹಜವಾದ ತಪ್ಪುಗಳೆ ಇಡಿಕಿರಿದಿವೆಯಲ್ಲ ಹಾಗೆಯೆ ಈ ಬದಲಿತ ಲಿಪಿ.ಲಿಪಿ ಬದಲಾವಣೆ ಬೇಡ ಎಂದು ಸೀರಿಯಸ್ಸಾಗಿ ನಂಬುವವರು ಅಂತದೆ ಒಂದು ಬಗೆಯ ಬರವಣಿಗೆ ಈ ಅಂಕಣ ಎಂದು ಬಗೆದರೂ ಸಾಕು.

ಈ ಸರಣಿಯ ಮೊದಲ ಲೇಕನಗಳಲ್ಲಿ ಲಿಪಿ ಬದಲಾವಣೆ ಹಿಂದಿನ ವಾಸ್ತವತೆಯನ್ನು, ವಿಗ್ನಾನವನ್ನ ಬರೆಯಲಾಗುತ್ತದೆ.ಈ ಸರಣಿ ಕನ್ನಡ ಸಾಮಾನ್ಯರನ್ನ ಗಮನದಲ್ಲಿ ಇಟ್ಟುಕೊಂಡಿದೆ. ಕನ್ನಡ ಕೇಂದ್ರಿತ ಹಲವು ಆಯಾಮಗಳ ವಿಶಿಶ್ಟ ವಿಶಯಗಳನ್ನು ಸಣ್ಣದಾಗಿ ಕೊಡುವ ಆಶಯ ಇದೆ.

ಓದುಗರು ಅವಶ್ಯವೆನಿಸಿದ ಯಾವುದಾದರೂ ವಿಶಯಗಳನ್ನು ತಿಳಿಸಿದರೆ ಸಾದ್ಯ ಇರುವ ವಿಶಯಗಳನ್ನು ಮಾತುಕತೆಗೆ ಎತ್ತಿಕೊಳ್ಳಬಹುದು.

Leave a Reply

Your email address will not be published.

Social Media Auto Publish Powered By : XYZScripts.com