ಇನ್ಮುಂದೆ Facebook, Twitter ನಲ್ಲೂ ಗ್ಯಾಸ್‌ ಸಿಲಿಂಡರ್‌ ಬುಕ್‌ ಮಾಡಬಹುದು…ಹೇಗೆ ?

ದೆಹಲಿ : ಫೇಸ್‌ಬುಕ್‌ ಹಾಗೂ ಟ್ವಿಟರ್‌ ಮೂಲಕವೂ ಎಲ್‌ಪಿಜಿ ಸಿಲಿಂಡರ್‌ ಬುಕ್‌ ಮಾಡುವ ವ್ಯವಸ್ಥೆಯನ್ನು ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್ (IOC) ಜನರಿಗೆ ಪರಿಚಯಿಸುತ್ತಿದೆ.

ಇಷ್ಟು ದಿನ ಗ್ರಾಹಕರು ಫೋನ್‌ ಅಥವಾ ಮೆಸೇಜ್‌ಗಳ ಮೂಲಕ ಗ್ಯಾಸ್‌ ಸಿಲಿಂಡರ್‌ ಬುಕ್‌ ಮಾಡಬಹುದಿತ್ತು. ಆದರೆ ಇನ್ಮುಂದೆ ಗ್ರಾಹಕರಿಗೆ ಬುಕ್ಕಿಂಗ್ ಸೇವೆ ಸುಲಭವಾಗಿಸುವ ನಿಟ್ಟಿನಲ್ಲಿ ಫೇಸ್‌ಬುಕ್‌ ಹಾಗೂ ಟ್ವಿಟರ್ ಮೂಲಕವೂ ಗ್ಯಾಸ್‌ ಬುಕ್ ಮಾಡಬಹುದಾಗಿದೆ. ತೈಲೋತ್ಪನ್ನ ಕಂಪನಿಗಳಲ್ಲಿ ಸಾಮಾಜಿಕ ಜಾಲತಾಣದ ಮೂಲಕ ರೀಫಿಲ್ಲಿಂಗ್‌ ಸೇವೆ ಒದಗಿಸುತ್ತಿರುವ ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ಡಿಜಿಟಲ್‌ ಇಂಡಿಯಾಗೆ ಉತ್ತೇಜನ ನೀಡುತ್ತಿದೆ.

ಫೇಸ್‌ಬುಕ್‌ ಮೂಲಕ ಇಂಡೇನ್‌ ಗ್ಯಾಸ್‌ ಬುಕ್‌ ಮಾಡುವುದು ಹೇಗೆ ?

ಫೇಸ್‌ಬುಕ್‌ಗೆ ಲಾಗಿನ್‌ ಆಗಿ. ಅದರಲ್ಲಿ ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ಲಿಮಿಟೆಡ್‌ನ ಅಧಿಕೃತ ಫೇಸ್‌ಬುಕ್‌ ಪೇಜ್‌ IndianOilCorpLimited ಗೆ ಭೇಟಿ ನೀಡಬೇಕು. ಅಲ್ಲಿ ಬುಕ್‌ ನೌ ಎಂಬ ಆಯ್ಕೆಯ ಮೇಲೆ ಕ್ಲಿಕ್‌ ಮಾಡಬೇಕು.

ಟ್ವಿಟರ್‌ನಲ್ಲಿ ಇಂಡೇನ್‌ ಗ್ಯಾಸ್‌ ಬುಕ್‌ ಮಾಡುವುದು ಹೇಗೆ ?

ರೀಫಿಲ್‌ @indianoilcorplimited ಎಂದು ಟ್ವೀಟ್‌ ಮಾಡಿ. ಮೊದಲ ಬಾರಿಯ ರಿಜಿಸ್ಟ್ರೇಷನ್‌ಗಾಗಿ ರಿಜಿಸ್ಟರ್‌ ಎಲ್‌ಪಿಜಿಐಡಿ ಎಂದು ಟ್ವೀಟ್‌ ಮಾಡಬೇಕು.

 

One thought on “ಇನ್ಮುಂದೆ Facebook, Twitter ನಲ್ಲೂ ಗ್ಯಾಸ್‌ ಸಿಲಿಂಡರ್‌ ಬುಕ್‌ ಮಾಡಬಹುದು…ಹೇಗೆ ?

Leave a Reply

Your email address will not be published.