Cricket : ಡೋಪಿಂಗ್ ನಿಯಮ ಉಲ್ಲಂಘನೆ : BCCI ನಿಂದ ಯೂಸುಫ್ ಪಠಾಣ್ ಅಮಾನತು

ಡೋಪಿಂಗ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಆಲ್ರೌಂಡರ್ ಯೂಸುಫ್ ಪಠಾಣ್ ಅವರನ್ನು ಬಿಸಿಸಿಐ 5 ತಿಂಗಳವರೆಗೆ ಅಮಾನತುಗೊಳಿಸಿದೆ. 2017 ರ ಮಾರ್ಚ್ ತಿಂಗಳಲ್ಲಿ ದೇಶಿ ಟೂರ್ನಿಯೊಂದರ ವೇಳೆ ಯೂಸುಫ್ ಪಠಾಣ್ ಡೋಪಿಂಗ್ ಪರೀಕ್ಷೆಗಾಗಿ ಮೂತ್ರದ ಸ್ಯಾಂಪಲ್ ನೀಡಿದ್ದರು. ಅದರಲ್ಲಿ ನಿಷೇಧಿತ ಟರ್ಬುಟಲೈನ್ ಅಂಶ ಪತ್ತೆಯಾಗಿತ್ತು.  ಕೆಮ್ಮಿನ ನಿವಾರಣೆಗಾಗಿ ಸೇವಿಸಿದ್ದ ಸಿರಪ್ ನಲ್ಲಿ ನಿಷೇಧಿತ ಉದ್ದೀಪನಾ ಪದಾರ್ಥವನ್ನು ಒಳಗೊಂಡಿತ್ತು.

‘ ಯೂಸುಫ್ ಪಠಾಣ್ ಅಜಾಗರೂಕತೆಯಿಂದ ನಿಷೇಧಿತ ಉದ್ದೀಪನ ಪದಾರ್ಥವನ್ನು ಸೇವಿಸಿದ್ದಾರೆ. ಅದು ಕೆಮ್ಮಿನ ಸಿರಪ್ ಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ ‘ ಎಂದು ಬಿಸಿಸಿಐನ ಗೌರವ ಕಾರ್ಯದರ್ಶಿ ಅಮಿತಾಭ್ ಚೌಧರಿ ಹೇಳಿದ್ದಾರೆ.  2017 ಆಗಸ್ಟ್ 15ರಿಂದಲೇ ಈ ಅಮಾನತು ಶಿಕ್ಷೆ ಜಾರಿಯಲ್ಲಿದ್ದು ಜನೆವರಿ 14 ಕ್ಕೆ ಮುಕ್ತಾಯವಾಗಲಿದೆ.

Leave a Reply

Your email address will not be published.

Social Media Auto Publish Powered By : XYZScripts.com